ಮಂಡ್ಯ :ಕೊರೊನಾ ವೈರಸ್ ಭೀತಿಯಿಂದಾಗಿ ಜಿಲ್ಲೆಯ ಪ್ರವಾಸಿ ತಾಣಗಳ ಮೇಲೆ ಅದರ ಪರಿಣಾಮ ಬೀರಿದೆ. ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ರಂಗನತಿಟ್ಟು ಹಾಗೂ ಕೆಆರ್ಎಸ್ ಬೃಂದಾವನಕ್ಕೆ ಪ್ರವೇಶ ನಿಷೇಧಿಸಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಕೊರೊನಾ ಭೀತಿ.. ರಂಗನತಿಟ್ಟು, ಕೆಆರ್ಎಸ್ ಬೃಂದಾವನ ಪ್ರವೇಶ ನಿಷೇಧ! - ಶ್ರೀರಂಗಪಟ್ಟಣದ ರಂಗನತಿಟ್ಟು ಹಾಗೂ ಕೆಆರ್ಎಸ್ ಬೃಂದಾವನ
ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ರಂಗನತಿಟ್ಟು ಹಾಗೂ ಕೆಆರ್ಎಸ್ ಬೃಂದಾವನಕ್ಕೆ ಪ್ರವೇಶ ನಿಷೇಧಿಸಿ, 144 ಸೆಕ್ಷನ್ ಜಾರಿ ಮಾಡಲಾಗಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್
ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಧಿಕಾರಿ ಡಾ. ಎಂ ವಿ ವೆಂಕಟೇಶ್ 144 ಸೆಕ್ಷನ್ ಜಾರಿ ಮಾಡಲಾಗಿದೆ. ಈ ನಿಷೇಧ ಇಂದಿನಿಂದ ಒಂದು ವಾರಗಳ ಕಾಲ ಇರಲಿದೆ. ಹೀಗಾಗಿ ಪ್ರವಾಸಿಗರ ನೆಚ್ಚಿನ ತಾಣ ಕೆಆರ್ಎಸ್ ಹಾಗೂ ರಂಗನತಿಟ್ಟು ಮುಚ್ಚಲಿದೆ. ವೀಕೆಂಡ್ ಮೂಡ್ನಲ್ಲಿದ್ದ ಪ್ರವಾಸಿಗರಿಗೆ ನಿರಾಸೆ ಇದರಿಂದಾಗಿ ಮೂಡಿದೆ. ಕಳೆದ ಒಂದು ವಾರದಿಂದ ಪ್ರವಾಸಿಗರ ಕೊರತೆ ಎರಡೂ ತಾಣಗಳಲ್ಲೂ ಕಂಡು ಬಂದಿತ್ತು.