ಕರ್ನಾಟಕ

karnataka

ETV Bharat / state

ರಮೇಶ್​ ಜಾರಕಿಹೊಳಿ ಪ್ರಕರಣ: ದಿನೇಶ್​ ಕಲ್ಲಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು! - ಮಂಡ್ಯದಲ್ಲಿ ದಿನೇಶ್​ ಕಲ್ಲಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು,

ರಮೇಶ್​ ಜಾರಕಿಹೊಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್​ ಕಲ್ಲಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.

Ramesh Jrakiholi case, Ramesh Jrakiholi case news, One more complaint against Dinesh Kallahalli, One more complaint against Dinesh Kallahalli in Mandya, Mandya news, ರಮೇಶ್​ ಜಾರಕಿಹೊಳಿ ಪ್ರಕರಣ, ರಮೇಶ್​ ಜಾರಕಿಹೊಳಿ ಪ್ರಕರಣ ಸುದ್ದಿ, ದಿನೇಶ್​ ಕಲ್ಲಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು, ಮಂಡ್ಯದಲ್ಲಿ ದಿನೇಶ್​ ಕಲ್ಲಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು, ಮಂಡ್ಯ ಸುದ್ದಿ,
ದಿನೇಶ್​ ಕಲ್ಲಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

By

Published : Mar 5, 2021, 2:05 PM IST

ಮಂಡ್ಯ: ರಮೇಶ್​ ಜಾರಕಿಹೊಳಿ ಪ್ರಕರಣ‌ದ ಸಿಡಿ ರೂವಾರಿ ವಿರುದ್ಧ ಜಿಲ್ಲೆಯಿಂದ ಮತ್ತೊಂದು ದೂರು ನೀಡಲಾಗಿದೆ.

ಮಂಡ್ಯದ ಮಾನವ ಹಕ್ಕುಗಳ ಸೇವಾ ಸಮಿತಿಯ ಜಿಲ್ಲಾಧ್ಯಕ್ಷೆ ಎಂ.ಕೆ.ಇಂದೀರಾ ರಾಜ್ಯಪಾಲ, ಸಿಎಂ, ಗೃಹ ಸಚಿವ, ಪೊಲೀಸ್ ಮಹಾ ನಿರ್ದೇಶಕರು, ಮಹಿಳಾ ಆಯೋಗ, ಮಾನವ ಹಕ್ಕು ಆಯೋಗಕ್ಕೆ ಪೋಸ್ಟ್ ಮೂಲಕ ದೂರು ನೀಡಿದ್ದಾರೆ.

ದಿನೇಶ್​ ಕಲ್ಲಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಜಾರಕಿಹೊಳಿಯ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ ದಿನೇಶ್ ಕಲ್ಲಹಳ್ಳಿ ಹಾಗೂ ರಾಜಶೇಖರ್​ ಮುಲಾಲಿ ವಿರುದ್ಧ ದೂರು ಸಲ್ಲಿಸಿದ್ದಾರೆ. ಇವರಿಬ್ಬರು ರಾಜ್ಯದ ಪ್ರಮುಖ ರಾಜಕೀಯ ವ್ಯಕ್ತಿಗಳು ಸೇರಿದಂತೆ ಪ್ರಮುಖ ಅಧಿಕಾರಿಗಳನ್ನು ಸಿಡಿ ಮೂಲಕ ಬೆದರಿಸುವ ಹುನ್ನಾರ ನಡೆಸ್ತಿದ್ದಾರೆ. ಇದರಲ್ಲಿ ಹನಿ ಟ್ರ್ಯಾಪ್​ನ ದೊಡ್ಡ ಜಾಲ ಮತ್ತು ಪ್ರಭಾವಿ ವ್ಯಕ್ತಿಗಳ ಕೈವಾಡ ಇರುವುದರ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.

ದಿನೇಶ್​ ಕಲ್ಲಹಳ್ಳಿ ವಿರುದ್ಧ ಮತ್ತೊಂದು ಪ್ರಕರಣ ದಾಖಲು

ಸಿಡಿ ಬಿಡುಗಡೆ ಮಾಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಹೊರಟಿರುವ ಇವರನ್ನು ಬಂಧಿಸಿ ತನಿಖೆ ನಡೆಸಬೇಕು. ಈ ಪ್ರಕರಣದಲ್ಲಿ ಮತ್ತಷ್ಟು ವ್ಯಕ್ತಿ ಇರುವ ಸಾಧ್ಯತೆ ಇದ್ದು, ಆರೋಪಿಗಳನ್ನು ಪತ್ತೆ ಹಚ್ಚುವಂತೆ ದೂರು ನೀಡಿದ್ದಾರೆ.

ಪೋಸ್ಟ್​ ಮೂಲಕ ದೂರಿನ ಮನವಿ ರವಾನಿಸಿ ಸೂಕ್ತ ತನಿಖೆ ನಡೆಸುವಂತೆ ಜಿಲ್ಲಾಧ್ಯಕ್ಷೆ ಇಂದಿರಾ ಒತ್ತಾಯಿಸಿದ್ದಾರೆ.

ABOUT THE AUTHOR

...view details