ಮಂಡ್ಯ/ಶಿವಮೊಗ್ಗ:ಸಕ್ಕರೆ ನಾಡಿನಲ್ಲಿ ಮಳೆರಾಯನ ಆರ್ಭಟಕ್ಕೆ ಜಿಲ್ಲೆಯ ವಿವಿಧೆಡೆ ಅವಾಂತರ ಸೃಷ್ಟಿಯಾಗಿದೆ. ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ ಸುರಿದಿದ್ದು, ಬಹುತೇಕ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡುವಂತಾಯಿತು.
ಮಂಡ್ಯ-ಶಿವಮೊಗ್ಗದ ಸಾಗರದಲ್ಲಿ ವರುಣನ ಆರ್ಭಟ
ಮಂಡ್ಯ ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಮಳೆರಾಯ ಆರ್ಭಟಿಸಿ ಕೆಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.
ಮಂಡ್ಯ, ಶಿವಮೊಗ್ಗದ ಸಾಗರದಲ್ಲಿ ವರುಣನ ಆರ್ಭಟ
ಸಂಜೆ ಆರಂಭವಾದ ಮಳೆ ಸುಮಾರು 3 ತಾಸು ಸುರಿಯಿತು. ಈ ವೇಳೆ ಅಂಚೆ ಕಚೇರಿ ಆವರಣಕ್ಕೆ ಮಳೆ ನೀರು ನುಗ್ಗಿತು. ಮಹಾವೀರ ಸರ್ಕಲ್, ಹೊಸಹಳ್ಳಿ ಸರ್ಕಲ್, ಹೊಳಲು ವೃತ್ತ, ಎಸ್.ಡಿ.ಜಯರಾಂ ಸರ್ಕಲ್, ರೈಲ್ವೆ ಗೇಟ್ ಬಳಿ ಸಿಲ್ವರ್ ಜ್ಯುಬಿಲಿ ಪಾರ್ಕ್, ಅರಣ್ಯ ಇಲಾಖೆ ಕಚೇರಿ ಬಳಿ ನೀರು ನಿಂತಿತ್ತು.
ಇತ್ತ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆ ಸುರಿದಿದೆ. ಮಧ್ಯಾಹ್ನದಿಂದಲೇ ಸಾಗರದಲ್ಲಿ ಮೋಡ ಕವಿದ ವಾತಾವರಣ ಇತ್ತು. ಕಳೆದ ನಾಲ್ಕೈದು ದಿನಗಳಿಂದ ಸಂಜೆ ಮೋಡ ಕವಿದ ವಾತವರಣ ಇತ್ತು. ಆದರೆ ಇಂದು ಮಳೆ ಜೋರಾಗಿಯೇ ಸುರಿದಿದೆ.