ಮಂಡ್ಯ: ಜಿಲ್ಲೆಯ ಏಳು ಕ್ಷೇತ್ರದಲ್ಲಿ ಸಮಬಲದ ಸ್ಪರ್ಧೆಯ ರಣತಂತ್ರ ರೂಪಿಸಿದ್ದೇವೆ. ಮೋದಿ ಮತ್ತು ಅಮಿತ್ ಶಾ ಬಂದ ಕಡೆ ಕಮಲ ಅರಳುತ್ತೆ ಎಂದು ಸಚಿವ ಆರ್.ಅಶೋಕ್ ತಿಳಿಸಿದ್ದಾರೆ. ನಗರದಲ್ಲಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮತ್ತು ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸುಭದ್ರ ಆಡಳಿತವನ್ನು ಕೋಡುತ್ತೇವೆ. ಅಲ್ಲದೇ ಮೋದಿ ಅಮಿತ್ ಶಾ ಬಂದ ಕಡೆಯಲ್ಲೆಲ್ಲ ಕಮಲ ಅರಳುತ್ತೆ ಎಂದು ಹೇಳಿದರು.
ಈ ಬಾರಿ ಮಂಡ್ಯದ ಎಲ್ಲಾ ತಾಲೂಕುಗಳಲ್ಲು ಸಮಬಲದ ತ್ರಿಕೋನ ಸ್ಪರ್ಧೆಯ ರಣತಂತ್ರವನ್ನು ರೂಪಿಸಲಾಗಿದೆ. ನಿನ್ನೆ ಸಿಎಂ ಜೊತೆ ಸೇರಿ ಫೋನ್ ಮೂಲಕ ಇಬ್ಬರು ಅಭ್ಯರ್ಥಿಗಳ ಜೊತೆ ಮಾತನಾಡಿದ್ದೇವೆ. ನಮ್ಮ ಅಭ್ಯರ್ಥಿಗಳು ಇಲ್ಲದ ಕ್ಷೇತ್ರಗಳಲ್ಲಿ ಇತರೇ ಪಕ್ಷದ ಅಭ್ಯರ್ಥಿಗಳ ಜೊತೆ ಮಾತನಾಡಲಾಗಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಗೆಲ್ಲುವುದಕ್ಕೆ ಸಿಎಂ ಹಾಗೂ ಪಕ್ಷದ ಮುಖಂಡರ ಜೊತೆ ಚರ್ಚೆಯನ್ನು ಮಾಡಲಾಗಿದೆ.
ಅದೇ ರೀತಿ ಉತ್ತರ ಕರ್ನಾಟಕದಲ್ಲೂ ಬೇರೆ ಪಕ್ಷದ ಅಭ್ಯರ್ಥಿಗಳ ಸಂಪರ್ಕದಲ್ಲಿದ್ದೇವೆ, ಅವರೊಂದಿಗೂ ಮಾತುಕತೆ ನಡೆಸಲಾಗಿದೆ. ನಮ್ಮ ಸರ್ವೆಯಲ್ಲಿ ಕಾಂಗ್ರೆಸ್ 70 ಸೀಟ್ನ್ನು ದಾಟಿಲ್ಲ, ಜೆಡಿಎಸ್ 20 ದಾಟಿಲ್ಲ. ಇಬ್ಬರು ಸೇರಿದರೆ ಒಟ್ಟು 90 ಆಗುತ್ತದೆ. ಉಳಿದೆಲ್ಲ ಸೀಟ್ಗಳು ಬಿಜೆಪಿಯ ಪರವಾಗಿರಲಿವೆ. ಅಲ್ಲದೇ ಮತ್ತೆ ಬಿಜೆಪಿ ಗೆಲುವುದು ಖಚಿತ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸಿದರು. ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಸೇರಿ ಸರ್ಕಾರ ಮಾಡಿದ್ದರು. ಅಧಿಕಾರ ಇದ್ದಾಗಲೇ ಸರ್ಕಾರ ಉಳಿಸಿಕೊಳ್ಳಲು ಆಗಿಲ್ಲ. ಇದೀಗ ಅವರು ಗೆಲ್ಲಲ್ಲು ಸಾಧ್ಯವೇ ಇಲ್ಲ. ಬಿಜೆಪಿ ಸರ್ಕಾರವನ್ನ ಜನರು ಬಯಸುತ್ತಿದ್ದಾರೆ. ಮಂಡ್ಯಕ್ಕೆ ಮೋದಿ ಬರ್ತಾರೆ, ಬಿಜೆಪಿ ಮತಷ್ಟು ಪ್ರಬಲಗೊಳ್ಳುತ್ತದೆ ಎಂದು ತಿಳಿಸಿದರು.
ಅಂಬರೀಶ್ ಹೆಸರಲ್ಲಿ ಸಂಸದೆ ಸುಮಲತಾ ಸೆಳೆಯಲು ಬಿಜೆಪಿ ಪ್ರಯತ್ನ:ಇನ್ನು ಅಂಬರೀಶ್ ಹೆಸರಲ್ಲಿ ಸಂಸದೆ ಸುಮಲತಾ ಸೆಳೆಯಲು ಬಿಜೆಪಿ ಪ್ರಯತ್ನ ನಡೆಸಿದೆ. ವಿಧಾನಸೌಧದ ಬಸವೇಶ್ವರ ಪ್ರತಿಮೆಯಿಂದ ರೆಸ್ಕೋರ್ಸ್ ರಸ್ತೆ ವರೆಗೆ ಅಂಬರೀಶ್ ಹೆಸರಿಡಲು ಸಿಎಂ ಬಸವರಾಜ ಬೊಮ್ಮಯಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ಆರ್.ಅಶೋಕ್ ಹೇಳಿಕೆ ನೀಡಿದ್ದಾರೆ. ಮುಂದುವರೆದು ಸುಮಲತಾ ಜೊತೆ ನಿರಂತರವಾಗಿ ಸಂಪರ್ಕದಲ್ಲಿದೇವೆ. ಅವರ ಮನೆಗೆ ಹೋಗಿ ಮಾತನಾಡಿದ್ದೇನೆ. ಅವರು ಸಹ ನಮ್ಮ ಸಿಎಂ ಜೊತೆ ಬಂದು ಮಾತನಾಡಿದ್ದಾರೆ. ಅವರು ನಮ್ಮ ಬಳಿ ಯಾವ ಬೇಡಿಕೆ ಇಟ್ಟಿಲ್ಲ. ಅವರಿಗೂ ಅವಕಾಶ ಕೊಡಬೇಕು, ನಿರಂತರವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದರು.
ರಸ್ತೆಗೆ ಅಬಂರಿಶ್ ಹೆಸರು ಇಡುವ ವಿಷಯವಾಗಿ ಈಗಾಗಲೇ ಮುಖ್ಯಮಂತ್ರಿ ಅವರಿ ಪತ್ರ ಕೊಟ್ಟಿದ್ದೇನೆ ಅವರು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೇ ಅಂಬರೀಶ್ ಅವರ ಸಮಾಧಿ ನಿರ್ಮಾಣಕ್ಕೆ 12 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಸಮಾಧಿಯನ್ನ ಒಂದು ತಿಂಗಳಲ್ಲಿ ಉದ್ಘಾಟನೆ ಮಾಡುತ್ತೇವೆ. ಅಂಬರೀಶ್ ಅವರ ಹೆಸರು ಉಳಿಸಲು ಅವರು ಮಾಡಿರುವ ಸಾಧನೆಯನ್ನ ಉಳಿಸುವ ನಮ್ಮ ಸರ್ಕಾರ ಕೆಲಸ ಮಾಡಿದೆ. ಸಂಸದೆ ಸುಮಲತಾ ಅವರಿಗೆ ನಮ್ಮ ಬಿಜೆಪಿ ಪಾರ್ಟಿ ಬಗ್ಗೆ ಒಲವಿದೆ. ಬಿಜೆಪಿಗೆ ಬಂದ್ರೆ ಸುಮಲತಾ ಅಂಬರೀಶ್ ಅವರಿಗೆ ಸ್ವಾಗತ ಎಂದು ಇದೇ ವೇಳೆ ತಿಳಿಸಿದರು.
ಗಣರಾಜ್ಯೋತ್ಸವ ಆಚರಣೆ: 74 ನೇ ಗಣರಾಜ್ಯೋತ್ಸವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮಂಡ್ಯ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಧ್ವಜಾರೋಹಣ ನೆರವೇರಿಸಿ ಪಥ ಸಂಚಲನದ ಮೂಲಕ ಗೌರವ ಸಲ್ಲಿಸಿದರು. ಪೊಲೀಸ್, ಮೌಂಟೆಡ್, ಅಗ್ನಿಶಾಮಕ ದಳ, ಗೃಹ ರಕ್ಷಕ ದಳ, ಎನ್‍ಸಿಸಿ ಸೇರಿ ಸುಮಾರು 29 ತುಕಡಿಗಳು ಆಕರ್ಷಕ ಪಥ ಸಂಚಲನ ನಡೆಸಿದರು. ಇದೇ ವೇಳೆ, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಈ ವೇಳೆ, ಶಾಸಕ ಎಂ.ಶ್ರೀನಿವಾಸ್, ನಗರಸಭೆ ಅಧ್ಯಕ್ಷ ಮಂಜು, ಡಿಸಿ ಗೋಪಾಲಕೃಷ್ಣ, ಸಿಇಒ ಶಾಂತಾ ಎಲ್ ಹುಲ್ಮನಿ, ಎಸ್ಪಿ ಎನ್.ಯತೀಶ್ ಸೇರಿ ಹಲವರು ಭಾಗಿಯಾಗಿದ್ದರು
ಇದನ್ನೂ ಓದಿ:ಕಲಬುರಗಿಯಲ್ಲಿ ಗಣರಾಜ್ಯೋತ್ಸವ: ಕಾಗಿಣಾದಿಂದ ಬೆಣ್ಣೆತೋರಾ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆಗೆ ಅಸ್ತು:ನಿರಾಣಿ