ಮಂಡ್ಯ:ಸೋಮವಾರದಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಲಿದೆ. ಹೀಗಾಗಿ, ಇಂದಿನಿಂದಲೇ ನಗರದ ಮದ್ಯದಂಗಡಿಗಳ ಮುಂದೆ ಜನರು ಮದ್ಯ ಖರೀದಿ ಮಾಡಲು ಮುಗಿಬಿದ್ದಿದ್ದಾರೆ.
ಲಾಕ್‌ಡೌನ್ ಅವಧಿಯಲ್ಲಿ ಬಾರ್ಗಳು ಕೂಡ ಸಂಪೂರ್ಣ ಬಂದ್ ಆಗಲಿವೆ. ಹೀಗಾಗಿ ಮದ್ಯದಂಗಡಿಗಳ ಮುಂದೆ ಎಣ್ಣೆ ಪ್ರಿಯರು ಸಾಲುಗಟ್ಟಿ ನಿಂತಿರುವ ದೃಶ್ಯಗಳು ಕಂಡು ಬಂರುತ್ತಿವೆ. ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲೂ ಇದೇ ದೃಶ್ಯಗಳು ಕಂಡುಬಂದಿದ್ದವು. ಈ ವರ್ಷವೂ ಕೂಡ ಮದ್ಯ ಶೇಖರಣೆಗೆ ಮುಂದಾಗಿದ್ದಾರೆ.