ಕರ್ನಾಟಕ

karnataka

ETV Bharat / state

ಹಣಕಾಸಿನ ವಿಚಾರಕ್ಕೆ ಜಗಳ: ಮಂಡ್ಯದಲ್ಲಿ ಮೇಸ್ತ್ರಿಯ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ - Murder in Mandya

Foreman murder in Madya: ರೈತರು ಜಮೀನಿನ ಕಡೆಗೆ ಹೋಗುತ್ತಿದ್ದ ವೇಳೆ ಮಂಡ್ಯ ರಸ್ತೆಯ ಸಾ ಮಿಲ್​ ಬಳಿ ಕೊಲೆಯಾದ ಮಂಟೇಸ್ವಾಮಿಯ ಮೃತದೇಹ ಪತ್ತೆಯಾಗಿದೆ.

Quarrel over money: murder of foreman by stabbing with knife
ಹಣಕಾಸಿನ ವಿಚಾರಕ್ಕೆ ಜಗಳ: ಮೇಸ್ತ್ರಿಯ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ

By ETV Bharat Karnataka Team

Published : Nov 7, 2023, 3:13 PM IST

Updated : Nov 7, 2023, 7:27 PM IST

ಹಣಕಾಸಿನ ವಿಚಾರಕ್ಕೆ ಜಗಳ: ಮೇಸ್ತ್ರಿಯ ಎದೆಗೆ ಚಾಕುವಿನಿಂದ ಚುಚ್ಚಿ ಕೊಲೆ

ಮಂಡ್ಯ: ಮೇಸ್ತ್ರಿಯೋರ್ವನನ್ನು ಚಾಕುವಿನಿಂದ ಎದೆಗೆ ಚುಚ್ಚಿ ಕೊಲೆ ಮಾಡಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ಸೋಮವಾರ ಜರುಗಿದೆ. ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತೀನಗರದಲ್ಲಿ ಘಟನೆ ನಡೆದಿದ್ದು, ಮಂಟೇಸ್ವಾಮಿ (32) ಕೊಲೆಯಾದ ದುರ್ದೈವಿ. ಯಲಾದಹಳ್ಳಿಯ ಮಂಟೇಸ್ವಾಮಿ ಜೊತೆಗೆ ಬಾರ್ ಬೆಂಡಿಂಗ್​ ಕೆಲಸ ಮಾಡುತ್ತಿದ್ದ ಮಂಡ್ಯ ತಾಲೂಕಿನ ಕಬ್ಬನಹಳ್ಳಿ ರವಿ ನಡುವೆ ಕೆಲ ದಿನಗಳ ಹಿಂದೆ ಹಣಕಾಸಿನ ವಿಚಾರದಲ್ಲಿ ಗಲಾಟೆ ನಡೆದಿತ್ತು. ಈ ಹಣದ ವಿಚಾರವಾಗಿ ಕೆಲಸಗಾರನೇ ಮೇಸ್ತ್ರಿಯನ್ನು ಕೊಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ಸೋಮವಾರ ಮಧ್ಯಾಹ್ನ ಮನೆಯಲ್ಲಿದ್ದ ಮಂಟೇಸ್ವಾಮಿ ಅವರನ್ನು ರವಿ ಸ್ವಲ್ಪ ವಿಚಾರ ಮಾತನಾಡಬೇಕಿದೆ ಬಾ ಎಂದು ಕರೆದಿದ್ದಾನೆ. ಮಂಟೇಸ್ವಾಮಿ ಹೋಗಲು ಸಿದ್ಧನಾಗಿದ್ದು, ಆ ವೇಳೆ ಆತನ ಪತ್ನಿ ಅವರು ಸರಿಯಿಲ್ಲ ಅವರ ಜೊತೆ ಹೋಗಬೇಡಿ ಎಂದು ಅಡ್ಡಿಪಡಿಸಿದ್ದಾರೆ. ಆದರೆ, ಅದನ್ನು ಕೇಳದೆ ಮಂಟೇಸ್ವಾಮಿ, ರವಿ ಜೊತೆ ಮಧ್ಯಾಹ್ನ 3 ಗಂಟೆಯ ಸಮಯದಲ್ಲಿ ಮನೆಯಿಂದ ತೆರಳಿದ್ದಾನೆ ಎಂದು ಹೇಳಲಾಗುತ್ತಿದೆ.

ಆದರೆ, ಮನೆಯಿಂದ ಹೊರ ಹೋದ ಅರ್ಧ ಗಂಟೆಯಲ್ಲೇ ಆತನ ಪೋನ್​ ಸ್ವಿಚ್ಡ್​ ಆಫ್ ಮಾಡಲಾಗಿದೆ. ರಾತ್ರಿ ಆದರೂ ಮನೆಗೆ ಬಾರದ ಮಂಟೇಸ್ವಾಮಿಯನ್ನು ಆತನ ಕುಟುಂಬಸ್ಥರು ಹಾಗೂ ಗೆಳೆಯರು ಸುತ್ತಮುತ್ತ ಹುಡುಕಿದ್ದಾರೆ. ಆದರೆ, ಎಷ್ಟೇ ಹುಡುಕಿದರು ಮಂಟೇಸ್ವಾಮಿ ಸಿಕ್ಕಿರಲಿಲ್ಲ. ಬೆಳಗ್ಗೆ ಮಂಡ್ಯ ರಸ್ತೆಯ ಸಾ ಮಿಲ್ ಬಳಿ ರೈತರು ಜಮೀನು ಕಡೆಗೆ ಹೋಗುತ್ತಿದ್ದ ವೇಳೆ ಮಂಟೇಸ್ವಾಮಿಯ ಮೃತದೇಹ ಕಂಡು ಬಂದಿದೆ.

ತಕ್ಷಣವೇ ಅವರು ಕೆ.ಎಂ. ದೊಡ್ಡಿ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ಕೃಷ್ಣಪ್ಪ, ವೃತ್ತ ನಿರೀಕ್ಷಕ ಆನಂದ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹಂತಕರ ಬೇಟೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ :ಹೊಸಕೋಟೆ: ಬಾಣಂತಿ ಪತ್ನಿ ಕೊಲೆ, ಪೊಲೀಸ್ ಕಾನ್ಸ್​ಟೆಬಲ್ ಪರಾರಿ

ಬಾಣಂತಿ ಪತ್ನಿಯನ್ನು ಕೊಂದು ಕಾನ್​ಸ್ಟೆಬಲ್​ ಪರಾರಿ: ಮತ್ತೊಂದು ಪ್ರಕರಣದಲ್ಲಿ11 ದಿನಗಳ ಹಿಂದೆಯಷ್ಟೇ ಮಗುವಿಗೆ ಜನಮ ನೀಡಿದ್ದ ಬಾಣಂತಿ ಪತ್ನಿಯನ್ನು ಪತಿಯೇ ಹತ್ಯೆ ಮಾಡಿರುವ ಘಟನೆ ಸೋಮವಾರ ಹೊಸಕೋಟೆ ತಾಲೂಕಿನ ಕೊಳತೂರು ಗ್ರಾಮದಲ್ಲಿ ನಡೆದಿದೆ. ಪೊಲೀಸ್​ ಕಾನ್ಸ್​ಟೇಬಲ್​​ ಆಗಿರುವ ಪತಿ ಕಿಶೋರ್​ ಘಟನೆ ಬಳಿಕ ಪರಾರಿಯಾಗಿದ್ದಾನೆ. ಪ್ರತಿಭಾ ಕೊಲೆಯಾದ ಮಹಿಳೆ.

ಕಿಶೋರ್​ ಪತ್ನಿಯ ಬಗ್ಗೆ ಅನುಮಾನ ಪಡುತ್ತಿದ್ದ ಎನ್ನಲಾಗಿದೆ. ಇತ್ತೀಚೆಗೆ ಹೆರಿಗೆಗಾಗಿ ಪ್ರತಿಭಾ ತವರು ಮನೆಗೆ ಹೋಗಿದ್ದರು. 11 ದಿನಗಳ ಹಿಂದೆಯಷ್ಟೆ ಹೆರಿಯಾಗಿದ್ದು, ಮಗು ಹಾಗೂ ತಾಯಿಯನ್ನು ನೋಡಲು ಹೋಗಿದ್ದ ಕಿಶೋರ್​ ಪತ್ನಿ ಕೊಂದು ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Last Updated : Nov 7, 2023, 7:27 PM IST

ABOUT THE AUTHOR

...view details