ಮಂಡ್ಯ: ಕೊರೊನಾ ಕೇಕೆ ಹಾಕುತ್ತಿದ್ದರೂ ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ರಾಜಕೀಯ ಪ್ರತಿಷ್ಠೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜೆಡಿಎಸ್ ಶಾಸಕರ ನಡುವೆ ಮಾತಿನ ಚಕಮಕಿ ನಡೆದಿದೆ.
ಜನಪ್ರತಿನಿಧಿಗಳ ಟಾಕ್ ವಾರ್: ಜೆಡಿಎಸ್ ನೀಡಿದ ಡೆಡ್ಲೈನ್ಗೆ ಬೆದರಿದ ಸಚಿವ - ಮಂಡ್ಯ ಲೇಟೆಸ್ಟ್ ನ್ಯೂಸ್
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಶಾಸಕರು ಸಚಿವ ನಾರಾಯಣಗೌಡರನ್ನು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
![ಜನಪ್ರತಿನಿಧಿಗಳ ಟಾಕ್ ವಾರ್: ಜೆಡಿಎಸ್ ನೀಡಿದ ಡೆಡ್ಲೈನ್ಗೆ ಬೆದರಿದ ಸಚಿವ Quarrel between Narayana gowda and suresh kumar](https://etvbharatimages.akamaized.net/etvbharat/prod-images/768-512-7371296-thumbnail-3x2-man.jpg)
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಶಾಸಕರು ಸಚಿವ ನಾರಾಯಣಗೌಡರನ್ನು ತರಾಟೆಗೆ ತೆಗೆದುಕೊಂಡರು. ಮಾಧ್ಯಮಗಳನ್ನು ಹೊರಗಿಟ್ಟು ಸಭೆ ಶುರು ಮಡುತ್ತಿದ್ದಂತೆ ಶಾಸಕ ಸುರೇಶ್‌ಗೌಡ ಸೇರಿದಂತೆ ಕೆಲ ಶಾಸಕರು ಕೊರೊನಾ ಮಾಹಿತಿ ಹಾಗೂ ಸಿಡಿ ವಿಚಾರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಸಚಿವ ಪುಟ್ಟರಾಜು ಹಾಗೂ ಜೆಡಿಎಸ್ ಶಾಸಕರು ಕೊರೊನಾ ವಿಚಾರವಾಗಿ ಯಾವುದೇ ಮಾಹಿತಿ ಸಿಗುತ್ತಿಲ್ಲ. ಗುರುವಾರದ ವರೆಗೂ ಗಡುವು ನೀಡಿದ್ದರು. ಗಡುವು ಹಿನ್ನಲೆ ಇಂದು ಸಭೆ ಮಾಡಿ ಮಾಹಿತಿ ನೀಡಲು ಸಚಿವರು ಮುಂದಾಗಿದ್ದರು. ಸಭೆಗೆ ಸಚಿವ ನಾರಾಯಣ ಗೌಡ ಬರುತ್ತಿದ್ದಂತೆ ಗರಂ ಆದ ಶಾಸಕರುಗಳು ಮಾತಿನಲ್ಲೇ ಕ್ಲಾಸ್ ತೆಗೆದುಕೊಂಡರು.