ಕರ್ನಾಟಕ

karnataka

ETV Bharat / state

ಮಂಡ್ಯ: ಮತ್ತೊಬ್ಬ ಪುನೀತ್ ರಾಜ್‌ಕುಮಾರ್ ಅಭಿಮಾನಿ ಸಾವು - ಮಂಡ್ಯದಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿ ಸಾವು

ಮಂಡ್ಯದಲ್ಲಿ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ನಿಧನದಿಂದ ಆಘಾತಕ್ಕೊಳಗಾಗಿದ್ದ ಅಭಿಮಾನಿ ಸಾವನ್ನಪ್ಪಿದ್ದಾರೆ.

puneeth-rajkumar-fan-dead-in-mandya
ಮಂಡ್ಯದಲ್ಲಿ ಮತ್ತೊಬ್ಬ ಪುನೀತ್ ರಾಜ್‌ಕುಮಾರ್ ಅಭಿಮಾನಿ ಸಾವು

By

Published : Oct 31, 2021, 11:37 AM IST

ಮಂಡ್ಯ: ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅವರ ನಿಧನದಿಂದ ಆಘಾತಕ್ಕೊಳಗಾಗಿದ್ದ ಅಭಿಮಾನಿ ಸಾವನ್ನಪ್ಪಿರುವ ಘಟನೆ ಮಂಡ್ಯ ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ನಡೆದಿದೆ.

ಕೆ.ಎಂ.ರಾಜೇಶ್ (50) ಎಂಬುವರೆ ಮೃತ ವ್ಯಕ್ತಿ. ಪುನೀತ್ ನಿಧನದ ಬಳಿಕ ಸರಿಯಾಗಿ ಊಟ ಸೇವಿಸದೇ ಅಸ್ವಸ್ಥರಾಗಿದ್ದ ಇವರು, ನಿನ್ನೆ ಅಂತಿಮ ದರ್ಶನಕ್ಕೆ ಹೋಗುವುದಾಗಿ ಮನೆಯಿಂದ ಹೊರಟಿದ್ದರು. ಆದರೆ ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್ ಬಳಿ ಸುಸ್ತಾಗಿ ಬಿದ್ದಿದ್ದು, ಸಂಜೆ ಪರಿಚಯಸ್ಥರು ನೋಡಿ ಮನೆಗೆ ಕರೆದುಕೊಂಡು ಹೋಗಿ ವೈದ್ಯರಿಂದ ಚಿಕಿತ್ಸೆಯನ್ನೂ ಕೊಡಿಸಿದ್ದರು.

ಮೃತ ರಾಜೇಶ್​ ನಡೆಸುತ್ತಿದ್ದ ಹೋಟೆಲ್​

ನಂತರವೂ ಚೇತರಿಸಿಕೊಳ್ಳದ ರಾಜೇಶ್​ ನಿನ್ನೆ ಮಧ್ಯರಾತ್ರಿ ಗಂಟೆ ವೇಳೆಗೆ ಮೃತಪಟ್ಟಿದ್ದಾರೆ. ಇವರು ಡಾ.ರಾಜ್ ಕುಟುಂಬದ ಅಪ್ಪಟ ಅಭಿಮಾನಿಯಾಗಿದ್ದು, ತಾವು ನಡೆಸುತ್ತಿದ್ದ ಹೋಟೆಲ್​ಗೆ ಡಾ.ರಾಜ್ ಕುಮಾರ್ ಅವರ ಹೆಸರನ್ನು ಇಟ್ಟಿದ್ದರು. ಇವರ ಸಾವಿನ‌ ಮೂಲಕ ಮಂಡ್ಯದಲ್ಲಿ ಇಬ್ಬರು ಅಭಿಮಾನಿಗಳು ಮೃತಪಟ್ಟಂತಾಗಿದೆ.

ಇದಕ್ಕೂ ಮುನ್ನ ಮಂಡ್ಯ ಸೇರಿದಂತೆ ರಾಜ್ಯದ ಹಲವೆಡೆ ಒಟ್ಟು 6 ಮಂದಿ ಅಭಿಮಾನಿಗಳು ಹೃದಯಾಘಾತ ಹಾಗೂ ಆತ್ಮಹತ್ಯೆಗೆ ಶರಣಾಗುವ ಮೂಲಕ ಪ್ರಾಣ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ:ಅಣ್ಣನ ಮಗ ವಿನಯ್​​ ರಾಜ್​ಕುಮಾರ್​ರಿಂದ ಅಪ್ಪು ಅಂತಿಮ ಸಂಸ್ಕಾರ

ABOUT THE AUTHOR

...view details