ಮಂಡ್ಯ: ಅಭಿಮಾನಿಗಳ ಆರಾಧ್ಯದೈವ, ಪವರ್‌ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿ ನಿನ್ನೆಗೆ ಒಂದು ವರ್ಷ ಕಳೆದಿದೆ. ಈ ನಡುವೆ ಅಪ್ಪು ಸ್ಮರಣೆಯಲ್ಲಿ ಭಾಗವಹಿಸಿದ್ದ ಅಭಿಮಾನಿಯೊಬ್ಬ ಅಪ್ಪು ಇಲ್ಲದ ಜೀವನ ಬೇಡವೆಂದು ನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
'ಅಪ್ಪು ಸ್ಮರಣೆ'ಯಲ್ಲಿ ಭಾಗವಹಿಸಿದ್ದ ಅಭಿಮಾನಿ ಆತ್ಮಹತ್ಯೆಗೆ ಶರಣು - puneeth rajkumar
ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ಪುನೀತ್ ರಾಜ್‌ಕುಮಾರ್ ಅಭಿಮಾನಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಅಪ್ಪು ಅಭಿಮಾನಿ
ಅಪ್ಪು ಅಭಿಮಾನಿ ಆತ್ಮಹತ್ಯೆಗೆ ಶರಣಾದ ಕುರಿತು ಮಾಹಿತಿ ನೀಡಿದ ಗ್ರಾಮಸ್ಥರು
ಹೊಸ ಆನಂದೂರು ಗ್ರಾಮದ ಕಿರಣ್ (22) ಆತ್ಮಹತ್ಯೆ ಮಾಡಿಕೊಂಡ ಯುವಕ. ಶನಿವಾರ ಶ್ರೀರಂಗಪಟ್ಟಣ ತಾಲೂಕಿನ ಹೊಸ ಆನಂದೂರು ಗ್ರಾಮದಲ್ಲಿ ನಡೆದ ಅಪ್ಪು ಸ್ಮರಣೆಯಲ್ಲಿ ಭಾಗವಹಿಸಿ, ಅನ್ನಸಂತರ್ಪಣೆ ಕೂಡ ನಡೆಸಿದ್ದರು. ಆದರೆ, ಕಾರ್ಯಕ್ರಮದ ಬಳಿಕ ರಾತ್ರಿ 10 ಗಂಟೆಗೆ ಮನೆಯ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಕೆ.ಆರ್.ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮನೆ ಮನದಲ್ಲೂ ಪುನೀತ್ ಪುಣ್ಯಸ್ಮರಣೆ.. ಇಡೀ ಗ್ರಾಮದ ಜನರಿಂದ ನೇತ್ರದಾನದ ವಾಗ್ಧಾನ