ಕರ್ನಾಟಕ

karnataka

ETV Bharat / state

ಪುಲ್ವಾಮಾ ದಾಳಿಯಾಗಿ ಎರಡು ವರ್ಷ: ಹುತಾತ್ಮ ಯೋಧ ಗುರು ಸಮಾಧಿಗೆ ಪೋಷಕರಿಂದ ಇಂದು ಪೂಜೆ

2019ರ ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಂಭವಿಸಿದ್ದ ಆತ್ಮಾಹುತಿ ದಾಳಿಯಲ್ಲಿ ಗುರು ಹುತಾತ್ಮನಾಗಿದ್ದ. ಗುರು ಮೃತಪಟ್ಟು ಎರಡು ವರ್ಷವಾದ ಹಿನ್ನಲೆಯಲ್ಲಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಯೋಧ ಗುರು
ಯೋಧ ಗುರು

By

Published : Feb 14, 2021, 4:23 AM IST

ಮಂಡ್ಯ: ಪುಲ್ವಾಮಾ ದಾಳಿಗೆ ಎರಡು ವರ್ಷವಾದ ಹಿನ್ನಲೆ, ದಾಳಿಯಲ್ಲಿ ಹುತಾತ್ಮನಾಗಿದ್ದ ಯೋಧ ಗುರು ಪುಣ್ಯಸ್ಮರಣೆಯನ್ನು ಇಂದು ಮಾಡಲಾಗುತ್ತದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗುಡಿಗೆರೆ ಗ್ರಾಮದಲ್ಲಿರುವ ಯೋಧ ಗುರು ಸಮಾಧಿಗೆ ಗುರುವಿನ ಪೋಷಕರು ಪೂಜೆ ಸಲ್ಲಿಸಲಿದ್ದಾರೆ.

2019ರ ಫೆಬ್ರವರಿ 14ರಂದು ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಸಂಭವಿಸಿದ್ದ ಆತ್ಮಾಹುತಿ ದಾಳಿಯಲ್ಲಿ ಗುರು ಹುತಾತ್ಮನಾಗಿದ್ದ. ಗುರು ಮೃತಪಟ್ಟು ಎರಡು ವರ್ಷವಾದ ಹಿನ್ನಲೆಯಲ್ಲಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.

ಹುತಾತ್ಮರಾದ ಬಳಿಕ ಗುರು ಅವರ ಕುಟುಂಬಕ್ಕೆ ಸರ್ಕಾರಗಳು, ಕರ್ನಾಟಕ ಸೇರಿದಂತೆ ದೇಶದ ನಾನ ಭಾಗದಿಂದ ಅಪಾರ ಪ್ರಮಾಣದ ಹಣ ಬರಿದು ಬಂದಿದೆ. ಆ ಹಣ ಬಂದಿದ್ದೇ ಏನೋ ಗೋತ್ತಿಲ್ಲ, ಗುರು ಕುಟುಂಬದಲ್ಲಿ ಅಂದು ನಿರ್ಮಾಣವಾದ ಕಲಹ ಇಂದಿಗೂ ಸಹ ನಿಂತಿಲ್ಲ.

ಇದನ್ನೂ ಓದಿ: ಸಂಪತ್ ರಾಜ್ ಉಚ್ಚಾಟನೆ ಸಂಬಂಧ ಡಿಕೆಶಿ ಜತೆ ಮಾತನಾಡುತ್ತೇನೆ: ಸಿದ್ದರಾಮಯ್ಯ

ಕಳೆದ ವರ್ಷ ಹುತಾತ್ಮ ಗುರು ಪತ್ನಿ ಹಾಗೂ ಅಪ್ಪ-ಅಮ್ಮ, ತಮ್ಮ ಪ್ರತ್ಯೇಕವಾಗಿ ಗುರು ಸಮಾಧಿಗೆ‌ ಪೂಜೆ‌ ಸಲ್ಲಿಸಿದ್ದರು. ಆ ವೇಳೆ ಗುರು ಪತ್ನಿ ತನ್ನ ಅತ್ತೆ-ಮಾವ ಹಾಗೂ ಮೈದುನನ ಬಗ್ಗೆ ಆರೋಪಗಳನ್ನು ಮಾಡಿದ್ದರೆ, ಗುರುವಿನ ತಾಯಿಯೂ ಸಹ ತನ್ನ ಸೊಸೆಯ ಬಗ್ಗೆ ಕೆಲ‌ ಆರೋಪಗಳನ್ನು ಮಾಡುವ ಮೂಲಕ ಗುರು ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಪುಷ್ಟಿ ನೀಡಿದ್ದರು.

ಇಂದು ಸಹ ಗುರುವಿನ ಸಮಾಧಿಗೆ, ಗುರು ಹೆಂಡತಿ‌ ಹಾಗೂ ಪೋಷಕರು ಪ್ರತ್ಯೇಕವಾಗಿ ಪೂಜೆ ಸಲ್ಲಿಸುವರು ಎಂದು ಹೇಳಲಾಗುತ್ತಿದೆ. ಈ ಮೂಲಕ‌ ಹುತಾತ್ಮ ಯೋಧ ಗುರು ಅವರ ಕುಟುಂಬದಲ್ಲಿ ಕಲಹನಿಂತಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ.

ABOUT THE AUTHOR

...view details