ಮಂಡ್ಯ:ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಕಾರಿಕೆಗೆ ಬಂದಿದ್ದ ಕ್ರಷರ್ ಮಾಲೀಕ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಇಲ್ಲಿನ ಹೊನ್ನೇಮಡು ಗ್ರಾಮದಲ್ಲಿ ನಡೆದಿದೆ.
ಗಣಿಗಾರಿಕೆ ನಡೆಸಲು ಬಂದ ಕ್ರಷರ್ ಮಾಲೀಕನ ಅಡ್ಡಗಟ್ಟಿದ ಗ್ರಾಮಸ್ಥರು.. ಮಾತಿನ ಚಕಮಕಿ- Video
ಹೊನ್ನೇಮಡು ಗ್ರಾಮದ ಸರ್ವೇ ನಂ.101ರಲ್ಲಿ ಒಂದು ವರ್ಷದ ಅವಧಿಗೆ ಶಾಸಕ ಸಿ.ಎಸ್ ಪುಟ್ಟರಾಜು ಅಣ್ಣನ ಮಗ ಮಾಜಿ ಜಿಪಂ ಸದಸ್ಯ ಸಿ.ಅಶೋಕ್ ಎಂಬಾತನಿಗೆ ಅಧಿಕಾರಿಗಳು 12 ಎಕರೆಯಲ್ಲಿ ಕಲ್ಲುಗಣಿಗಾರಿಕೆಗೆ ಗುತ್ತಿಗೆ ನೀಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊನ್ನೇಮಡು ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಗುತ್ತಿಗೆ ನೀಡಿದ್ದಾರೆ. ಹೀಗಾಗಿ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು STG ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ನ ಮಾಲೀಕ ಜಿಪಂ ಮಾಜಿ ಸದಸ್ಯ ಸಿ.ಅಶೋಕ್ ಆಗಮಿಸಿದ ವೇಳೆ ಗ್ರಾಮಸ್ಥರು ಅಡ್ಡಗಟ್ಟಿದರು.
ಹೊನ್ನೇಮಡು ಗ್ರಾಮದ ಸರ್ವೇ ನಂ.101ರಲ್ಲಿ ಒಂದು ವರ್ಷದ ಅವಧಿಗೆ ಶಾಸಕ ಸಿ.ಎಸ್ ಪುಟ್ಟರಾಜು ಅಣ್ಣನ ಮಗ ಮಾಜಿ ಜಿಪಂ ಸದಸ್ಯ ಸಿ.ಅಶೋಕ್ ಎಂಬಾತನಿಗೆ ಅಧಿಕಾರಿಗಳು 12 ಎಕರೆಯಲ್ಲಿ ಕಲ್ಲುಗಣಿಗಾರಿಕೆಗೆ ಗುತ್ತಿಗೆ ನೀಡಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ತಕ್ಷಣವೇ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಗ್ರಾಮಸ್ಥರನ್ನು ಚದುರಿಸಿದ್ದಾರೆ.