ಕರ್ನಾಟಕ

karnataka

ETV Bharat / state

ಕೊರೊನಾ ವಾರಿಯರ್ಸ್​ಗೆ ಅಭಿನಂದನೆಗಳ ಸುರಿಮಳೆ - ಮಂಡ್ಯದಲ್ಲಿ ಕೊರೊನಾ ವಿರುದ್ಧ ಹೋರಾಟ

ಮಂಡ್ಯ ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಕೊರೊನಾ ವಾರಿಯರ್ಸ್​ಗಳಿಗೆ ವಿಶೇಷ ಸನ್ಮಾನ ನೆರವೇರಿತು. ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಎಎಸ್​ಪಿ ಶೋಭಾರಾಣಿ ಸೇರಿದಂತೆ ಅಧಿಕಾರಿಗಳು ಈ ಸನ್ಮಾನದಲ್ಲಿ ಪಾಲ್ಗೊಂಡಿದ್ದರು.

Public Congratulate to the Corona Warriors in mandya
ಕೊರೊನಾ ವಾರಿಯರ್ಸ್​ಗೆ ಅಭಿನಂದನೆಗಳ ಸರಮಾಲೆ

By

Published : May 6, 2020, 7:46 PM IST

ಮಂಡ್ಯ: ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಗ್ರಾಮಸ್ಥರಿಂದ ಅದ್ಧೂರಿ ಗೌರವ ಸಲ್ಲಿಸಲಾಯಿತು. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ, ಎಎಸ್​ಪಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಸಾಕ್ಷಿಯಾದರು.

ಕೊರೊನಾ ವಾರಿಯರ್ಸ್​ಗೆ ಅಭಿನಂದನೆಗಳ ಸರಮಾಲೆ

ಈ ಹೃದಯ ಸ್ಪರ್ಶಿ ಘಟನೆ ನಡೆದದ್ದು, ತಾಲೂಕಿನ ಇಂಡುವಾಳು ಗ್ರಾಮದ ವೇದಿಕೆಯಲ್ಲಿ. ಇನ್ನು ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಆರೋಗ್ಯಾಧಿಕಾರಿ ಡಾ. ಮಂಚೇಗೌಡ, ಎಎಸ್ಪಿ ಶೋಭಾ ರಾಣಿ ಆಗಮಿಸುತ್ತಿದ್ದಂತೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಸ್ವಾಗತಿಸಲಾಯಿತು.

ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಸೇರಿದಂತೆ ತಾಲೂಕಿನ ಎಲ್ಲ ಕೊರೊನಾ ವಾರಿಯರ್ಸ್​ಗೆ ಸನ್ಮಾನಿಸಲಾಯಿತು. ವಿಶೇಷವಾಗಿ ಆಶಾ ಕಾರ್ಯಕರ್ತೆಯರಿಗೆ ತವರಿನ ಉಡುಗೊರೆ ರೀತಿಯಲ್ಲಿ ಸೀರೆಗಳನ್ನು ಕೊಟ್ಟು, ಅಭಿನಂದಿಸಲಾಯಿತು.

ಇಂತಹ ಕಾರ್ಯಕ್ರಮ ಸಂತಸದ ಜೊತೆಗೆ ಉತ್ಸಾಹ ಮೂಡಿಸಿದೆ. ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸುವುದಾಗಿ ಆಶಾ ಕಾರ್ಯಕರ್ತೆಯೊಬ್ಬರು ಭರವಸೆ ನೀಡಿದರು.

ABOUT THE AUTHOR

...view details