ಕರ್ನಾಟಕ

karnataka

ETV Bharat / state

ಕಾವೇರಿ ಮಂಡಳಿ ಆದೇಶಕ್ಕೆ ಸ್ವಾಗತ: ನಾಲೆಗಳಿಗೆ ನೀರು ಬಿಡದಿರುವುದಕ್ಕೆ ಆಕ್ರೋಶ

ರಾಜ್ಯ ಸರ್ಕಾರ ನಿರ್ವಹಣಾ ಮಂಡಳಿಯತ್ತ ಬೆಟ್ಟು ತೋರಿಸಿ ನೀರು ಬಿಡಲು ಆಗೋದಿಲ್ಲ ಎಂದು ಹೇಳಿತ್ತು. ಇದರಿಂದ ರೈತರು ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿಆಹೋರಾತ್ರಿ ಹೋರಾಟ ನಡೆಸುತ್ತಿದ್ದಾರೆ.

ನೀರಿಗಾಗಿ ರೈತರ ಹೋರಾಟ

By

Published : Jun 25, 2019, 4:41 PM IST

ಮಂಡ್ಯ: ಕಾವೇರಿ ನೀರು ನಿರ್ವಹಣಾ ಮಂಡಳಿಯ ಆದೇಶಕ್ಕೆ ಜಿಲ್ಲೆಯ ರೈತರು ಸ್ವಾಗತ ಕೋರಿದ್ದಾರೆ. ಮಳೆ ಬಂದರೆ ನೀರು ಬಿಡಿ ಎಂಬ ಆದೇಶ ರೈತರಿಗೆ ಸಂತಸ ತಂದಿದೆ. ಆದರೆ ನಾಲೆಗಳಿಗೆ ಕೆ.ಆರ್.ಎಸ್‌ನಿಂದ ನೀರು ಬಿಡದೇ ಇರೋದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಹೌದು, ಕಳೆದ ಐದು ದಿನಗಳಿಂದ ರೈತರು ನಾಲೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ನಗರದ ಕಾವೇರಿ ನೀರಾವರಿ ನಿಗಮದ ಎದುರು ಹೋರಾಟ ಶುರು ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ನಿರ್ವಹಣಾ ಮಂಡಳಿಯತ್ತ ಬೆಟ್ಟು ತೋರಿಸಿ ನೀರು ಬಿಡಲು ಆಗೋದಿಲ್ಲ ಎಂದು ಹೇಳಿತ್ತು. ಇದರಿಂದ ರೈತರು ಆಹೋ ರಾತ್ರಿ ಹೋರಾಟವನ್ನು ಮುಖಂಡ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ನಡೆಸುತ್ತಿದ್ದಾರೆ.

ನೀರಿಗಾಗಿ ರೈತರ ಹೋರಾಟ

ನಿರ್ವಹಣಾ ಮಂಡಳಿಯ ಆದೇಶವನ್ನು ಸ್ವಾಗತ ಮಾಡಿರುವ ಹೋರಾಟಗಾರರು, ಈಗಲಾದರೂ ಸರ್ಕಾರ ರೈತರ ಬೆಳೆ ರಕ್ಷಣೆ, ಜಾನುವಾರುಗಳ ಕುಡಿಯೋ ನೀರಿಗಾಗಿ ಕೆ.ಆರ್.ಎಸ್‌ನಿಂದ ನೀರು ಬಿಡಬೇಕು ಎಂದು ಒತ್ತಾಯ ಮಾಡಿ ಹೋರಾಟ ಮಾಡುತ್ತಿದ್ದಾರೆ‌. ನೀರು ಬಿಡುವವರೆಗೂ ಹೋರಾಟ ನಿಲ್ಲಿಸೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

For All Latest Updates

ABOUT THE AUTHOR

...view details