ಮಂಡ್ಯ:ನಾಲೆಗಳಿಗೆ ಕೆಆರ್ಎಸ್ನಿಂದ ನೀರು ಹರಿಸುವಂತೆ ಒತ್ತಾಯಿಸಿ ರೈತ ಸಂಘದ ಮುಖಂಡರು ತಾಲೂಕಿನ ಕೆಆರ್ಎಸ್ ಕಾವೇರಿ ನೀರಾವರಿ ಕಚೇರಿ ಎದುರು ಧರಣಿ ನಡೆಸಿದರು.
ಕೆಆರ್ಎಸ್ನಿಂದ ನಾಲೆಗಳಿಗೆ ನೀರು ಬಿಡುವಂತೆ ಒತ್ತಾಯಿಸಿ ರೈತರಿಂದ ಪ್ರತಿಭಟನೆ - protest by the farmers union in mandya
ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ನೀಡಿದೆ. ಆದರೆ ನಮಗೆ ನೀರಿಲ್ಲ. ಹೀಗಾಗಿ ಕೂಡಲೇ ಬೆಳೆ ರಕ್ಷಣೆಗಾಗಿ ನೀರು ಹರಿಸಬೇಕು ಎಂದು ಒತ್ತಾಯಿಸಿ ರೈತರು ಧರಣಿ ನಡೆಸಿದರು.
ರೈತ ಸಂಘದ ವತಿಯಿಂದ ಆಗ್ರಹ...
ಕಾವೇರಿ ನೀರು ನಿರ್ವಹಣಾ ಮಂಡಳಿ ತಮಿಳುನಾಡಿಗೆ ನೀರು ಬಿಡುವಂತೆ ಸೂಚನೆ ನೀಡಿದೆ. ಆದರೆ ನಮಗೆ ನೀರಿಲ್ಲ. ಕೂಡಲೇ ಬೆಳೆ ರಕ್ಷಣೆಗಾಗಿ ನೀರು ಹರಿಸಬೇಕು ಎಂದು ಒತ್ತಾಯ ಮಾಡಿ ಧರಣಿ ನಡೆಸಿದ ರೈತರು, ನಿಗಮದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸದ್ಯ ಭತ್ತದ ಬೆಳೆ ಕೊಯ್ಲಿಗೆ ಬಂದಿದ್ದರೂ ಕಬ್ಬಿನ ಬೆಳೆ ರಕ್ಷಣೆಗಾಗಿ ನೀರು ಬೇಕಾಗಿದೆ. ಮಳೆ ಸಣ್ಣ ಪ್ರಮಾಣದಲ್ಲಿ ಆಗಿದ್ದರೂ ನೀರು ಸಾಕಾಗುತ್ತಿಲ್ಲ. ಕೂಡಲೇ ನೀರು ಬಿಡಬೇಕು. ರೈತರ ರಕ್ಷಣೆ ಮಾಡಬೇಕು ಎಂದು ಒತ್ತಾಯ ಮಾಡಿದರು.