ಮಂಡ್ಯ :ನಿಖಿಲ್ ಕುಮಾರಸ್ವಾಮಿ ಈಗಾಗಲೇ ಗೆದ್ದಾಗಿದೆ. ಬೇಕಾದರೆ ಬೆಟ್ ಕಟ್ಟುತ್ತೀನಿ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಶಾಸಕ ನಾರಾಯಣ ಗೌಡರನ್ನು ಬಂಧಿಸುವಂತೆ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಿಖಿಲ್ ಗೆಲವು ಘೋಷಿಸಿದ ಶಾಸಕ... ಎಂಎಲ್ಎ ನಾರಾಯಣ ಗೌಡ ಬಂಧನಕ್ಕೆ ಆಗ್ರಹ - ಶಾಸಕ ನಾರಾಯಣ ಗೌಡ
ನಿಖಿಲ್ ಕುಮಾರಸ್ವಾಮಿ ಈಗಾಗಲೇ ಗೆದ್ದಾಗಿದೆ. ಬೇಕಾದರೆ ಬೆಟ್ ಕಟ್ಟುತ್ತೀನಿ ಎಂದು ಈ ಹಿಂದೆ ಹೇಳಿಕೆ ನೀಡಿದ್ದ ಶಾಸಕ ನಾರಾಯಣ ಗೌಡರನ್ನು ಬಂಧಿಸುವಂತೆ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ
ನಿಖಿಲ್ ಈಗಾಗಲೇ ಚುನಾವಣೆಯಲ್ಲಿ ಗೆದ್ದಾಗಿದೆ. ಅಧಿಕೃತ ಘೋಷಣೆ ಮಾತ್ರ ಬಾಕಿ ಇದ್ದು, ಗೆಲುವಿನ ಸಂಭ್ರಮ ಆಚರಿಸುತ್ತೇವೆ. ನಿಖಿಲ್ ಬಂದಾಗ ಪಟಾಕಿ ಸಿಡಿಸಿ, ಗುಲಾಬಿ ಹೂವಿನ ಹಾರ ಹಾಕಿ ಸಂಭ್ರಮಿಸಲಾಗುತ್ತದೆ ಎಂದು ಹೇಳಿಕೆ ನೀಡಿದ್ದರು.
ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ
ಬೆಟ್ಟಿಂಗ್ ದಂಧೆಗೆ ಪ್ರಚೋದನೆ ಮಾಡುತ್ತಿರೋ ಶಾಸಕ ನಾರಾಯಣ ಗೌಡರನ್ನು ಬಂಧಿಸಬೇಕು ಎಂದು ಆಗ್ರಹಿಸಿ ರೈತ ಸಂಘದ ಮುಖಂಡರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.