ಮಂಡ್ಯದಲ್ಲಿ ಗೋ ಅಕ್ರಮ ಸಾಗಣೆ: ಗೋ ರಕ್ಷಕರ ಪ್ರತಿಭಟನೆ - Illegal cow Transport in mandya News
ಮಂಡ್ಯದ ತಾವರಗೆರೆಯಲ್ಲಿ ನಡೆಯುತ್ತಿದ್ದ ಅಕ್ರಮ ಗೋ ಸಾಗಣೆ ಪತ್ತೆ ಹಚ್ಚಿ ಗೋ ರಕ್ಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ, ಪೊಲೀಸರು ದೇವರ ಬಸವಗಳನ್ನ ಮರೆ ಮಾಚಿ ಬರಿ ಎಮ್ಮೆಗಳನ್ನ ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸರ ವಿರುದ್ಧ ಜನರು ಪ್ರತಿಭಟನೆ ನಡೆಸಿದ್ದಾರೆ.
ಗೋ ರಕ್ಷಕರ ಪ್ರತಿಭಟನೆ
ಮಂಡ್ಯ: ದೇವರ ಬಸವಗಳನ್ನ ಮರೆ ಮಾಚಿ ಬರಿ ಎಮ್ಮೆಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಅಂತಾ ಆರೋಪಿಸಿ ಮಂಡ್ಯ ಪೂರ್ವ ಪೊಲೀಸ್ ಠಾಣೆ ಮುಂದೆ ಗೋ ರಕ್ಷಕರು ಪ್ರತಿಭಟನೆ ನಡೆಸಿದ್ದಾರೆ.
ಹೀಗಾಗಿ ಆಕ್ರೋಶಗೊಂಡ ಗೋ ರಕ್ಷಕರು ಮಂಡ್ಯ ಪೂರ್ವ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಈ ಸಂದರ್ಭ ಪೊಲೀಸರು ಮತ್ತು ಗೋ ರಕ್ಷಕರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಡಿವೈಎಸ್ಪಿ ನವೀನ್ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನ ಮನವೊಲಿಸಿದ್ದಾರೆ.