ಮಂಡ್ಯ: ಮೀನು ಹಿಡಿಯಲು ಹಾಕಲಾಗಿದ್ದ ಬಲೆಗೆ ಸಿಲುಕಿದ್ದ, ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ. ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದ ಕೆರೆಯಲ್ಲಿ, ಸತತ ಒಂದು ಗಂಟೆ ಕಾರ್ಯಾಚರಣೆ ನಡೆಸಿ ಹೆಬ್ಬಾವನ್ನು ರಕ್ಷಿಸಲಾಗಿದೆ.
ಮೀನಿನ ಬಲೆಗೆ ಸಿಲುಕಿದ ಹೆಬ್ಬಾವು... ಒಂದು ಗಂಟೆ ಕಾರ್ಯಾಚರಣೆ ಬಳಿಕ ರಕ್ಷಣೆ - ಮದ್ದೂರು ತಾಲೂಕಿನ ಕಾಡುಕೊತ್ತನಹಳ್ಳಿ ಕೆರೆ
ಮೀನು ಹಿಡಿಯಲು ಹಾಕಲಾಗಿದ್ದ ಬಲೆಗೆ ಸಿಲುಕಿದ್ದ, ಹೆಬ್ಬಾವನ್ನು ರಕ್ಷಣೆ ಮಾಡಲಾಗಿದೆ.

ಮೀನಿನ ಬಲೆಗೆ ಸಿಲುಕಿದ ಹೆಬ್ಬಾವಿನ ರಕ್ಷಣೆ
ಮೀನಿನ ಬಲೆಗೆ ಸಿಲುಕಿದ ಹೆಬ್ಬಾವಿನ ರಕ್ಷಣೆ
ಉರಗ ಪ್ರೇಮಿ ಮ.ನಾ. ಪ್ರಸನ್ನ ಕುಮಾರ್ ಅವರು, ಸುಮಾರು 12 ಕೆ.ಜಿ ತೂಕದ 10 ಅಡಿಯ ಹೆಬ್ಬಾವನ್ನು ರಕ್ಷಣೆ ಮಾಡಿ ಅರಣ್ಯಕ್ಕೆ ಬಿಟ್ಟಿದ್ದಾರೆ.
ಕಳೆದ ರಾತ್ರಿ ಮೀನುಗಾರರು ಮೀನು ಹಿಡಿಯಲು ಕೆರೆಗೆ ಬಲೆಯನ್ನು ಹಾಕಿದ್ದರು. ಬಲೆಗೆ ಹೆಬ್ಬಾವು ಸಿಲುಕಿದ್ದನ್ನು ನೋಡಿದ ಮೀನುಗಾರರು, ಉರಗ ಪ್ರೇಮಿ ಪ್ರಸನ್ನ ಕುಮಾರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದರು. ಬಳಿಕ ಸ್ಥಳಕ್ಕೆ ಬಂದ ಪ್ರಸನ್ನ ಕುಮಾರ್, ಬಲೆಗೆ ಸಿಲುಕಿ ಒದ್ದಾಡುತ್ತಿದ್ದ ಹೆಬ್ಬಾವನ್ನು ಹರಿಗೋಲು ಸಹಾಯದಿಂದ ರಕ್ಷಣೆ ಮಾಡಿದ್ದಾರೆ.