ಮಂಡ್ಯ:ರಾಜ್ಯದಲ್ಲಿ ಉಪ ಚುನಾವಣೆ ಮುಗಿದ ನಂತರ ಮತ್ತೊಂದು ಸುತ್ತಿನ ಆಪರೇಷನ್ ಕಮಲ ನಡೆಯುತ್ತೆ ಎಂಬ ಅನುಮಾನ ಕಾಡ್ತಿದೆ. ಇದಕ್ಕೆ ಇಂಬು ನೀಡುವಂತೆ ಕಂದಾಯ ಸಚಿವರು ಹೇಳಿಕೆ ನೀಡಿದ್ದು, ಕಾಂಗ್ರೆಸ್ ನಾಯಕರ ಆತಂಕಕ್ಕೆ ಕಾರಣವಾಗಿದೆ.
ಇನ್ನೊಂದು ರೌಂಡ್ ಆಪರೇಷನ್ ಕಮಲ.. ಸುಳಿವು ನೀಡಿದರಾ ಸಚಿವ ಆರ್.ಅಶೋಕ್?
ಕಾಂಗ್ರೆಸ್ ಶಾಸಕರನ್ನ ಕಾಪಾಡಿಕೊಂಡರೆ ಅದೇ ಅವರ ದೊಡ್ಡ ಸಾಧನೆ. ಅಲ್ಲಿಂದ ಯಾರ್ ಯಾರ್ ಓಡ್ಹೋಗ್ತಾರೋ ಅದನ್ನ ಮೊದಲು ನೋಡಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೆ ಕಂದಾಯ ಸಚಿವ ಆರ್.ಅಶೋಕ್ ಟಾಂಗ್ ನೀಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್.ಅಶೋಕ್, ಕಾಂಗ್ರೆಸ್ ಶಾಸಕರನ್ನ ಕಾಪಾಡಿಕೊಂಡರೆ ಅದೇ ಅವರ ದೊಡ್ಡ ಸಾಧನೆ. ಅಲ್ಲಿಂದ ಯಾರ್ ಯಾರ್ ಓಡ್ಹೋಗ್ತಾರೋ ಅದನ್ನ ಮೊದಲು ನೋಡಲಿ. ನಂತರ ನಮಗೆ ಹೇಳಲಿ ಎಂದು ಆರ್. ಅಶೋಕ್ ಟಾಂಗ್ ನೀಡಿದರು. ದಿನೇಶ್ ಗುಂಡೂರಾವ್ ಹಗಲುಗನಸು ಕಾಣುತ್ತಿದ್ದಾರೆ. ಅವರ ಸರ್ಕಾರ ಬಿದ್ದಾಗ ಅವರು ದೇಶದಲ್ಲೇ ಇರಲಿಲ್ಲ. ಹಗಲು ಕನಸು ಕಾಣುವುದರಲ್ಲಿ ದಿನೇಶ್ ಗುಂಡೂರಾವ್ ನಿಪುಣರು ಎಂದರು.
ಇದೇ ವೇಳೆ ಮಹಾರಾಷ್ಟ್ರ ವಿಚಾರವಾಗಿ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ಜನಾದೇಶ ಸಿಕ್ಕಿದ್ದು ಬಿಜೆಪಿ ಮತ್ತು ಶಿವಸೇನೆಗೆ. ಶಿವಸೇನೆ ಬೆನ್ನಿಗೆ ಚೂರಿ ಹಾಕಿ ಬೇರೆ ಹೋಗಿದ್ದಾರೆ. ಆ ಸರ್ಕಾರ ಆರು ತಿಂಗಳೂ ಇರೋದಿಲ್ಲ ಎಂದು ಭವಿಷ್ಯ ನುಡಿದರು. ನಮ್ಮ ಸರ್ಕಾರ ಆರು ತಿಂಗಳು ಇರಲ್ಲ ಎನ್ನುತ್ತಿದ್ದಾರೆ. ಅದು ಕಾಂಗ್ರೆಸ್‌ನವರ ಭ್ರಮೆ. ನಾವು ಅಧಿಕಾರ ಪೂರ್ಣಗೊಳಿಸುತ್ತೇವೆ ಎಂದರು.