ಕರ್ನಾಟಕ

karnataka

ETV Bharat / state

ಏಯ್‌ ಕೇಳ್ರೀ ಇಲ್ಲಿ, ಶೈಕ್ಷಣಿಕ ಪ್ರಗತಿ ಸಾಧಿಸದಿದ್ರೇ ಗಂಟುಮೂಟೆ ಕಟ್ಟಿ.. ಪ್ರಾಂಶುಪಾಲರಿಗೇ ಜೆಡಿಎಸ್ ಶಾಸಕರ ಕ್ಲಾಸ್‌! - Kannada news

ಫಲಿತಾಂಶ ಕಡಿಮೆಯಾಗಿದ್ದರಿಂದ ಆಕ್ರೋಶ ಹೊರಹಾಕಿದ ಶಾಸಕ ಸುರೇಶ್ ಗೌಡ, ಇದೇ ರೀತಿ ಮುಂದುವರೆದ್ರೆ ಗಂಟುಮೂಟೆ ಕಟ್ಟಿಕೊಂಡು ಹೋಗಿ, ನಿಮಗೆ ಮಾನ ಮರ್ಯಾದೆ ಇಲ್ವ ಎಂದು ತರಾಟೆಗೆ ತೆಗೆದುಕೊಂಡರು.

ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಪ್ರಾಂಶುಪಾಲರಿಗೆ ಎಚ್ಚರಿಕೆ ಕೊಟ್ಟ ಜೆಡಿಎಸ್ ಶಾಸಕ

By

Published : Jun 29, 2019, 9:26 PM IST

ಮಂಡ್ಯ : ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿ ಕಾಣದೇ ಇದ್ರೆ ಗಂಟುಮೂಟೆ ಕಟ್ಟಿ ಎಂದು ಪಿಯು ಕಾಲೇಜು ಉಪಪ್ರಾಂಶುಪಾಲರಿಗೆ ಶಾಸಕ ಸುರೇಶ್ ಗೌಡ ಎಚ್ಚರಿಕೆ ನೀಡಿದ ಘಟನೆ ನಡೆದಿದೆ.

ನಾಗಮಂಗಲದ ಪ್ರವಾಸಿ ಮಂದಿರಲ್ಲಿ ನಡೆದ ಶೈಕ್ಷಣಿಕ ಉನ್ನತಿಗಾಗಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರ ಸಭೆಯನ್ನೂ ಕರೆಯಲಾಗಿತ್ತು. ನಾಗಮಂಗಲ ಪಟ್ಣಣದ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮತ್ತು ಶಾಸಕ ಸುರೇಶ್‌ಗೌಡ ನಡುವೆ ವಿದ್ಯಾರ್ಥಿಗಳ ಫಲಿತಾಂಶದ ಕುರಿತು ವಾಗ್ವಾದ ನಡೆಯಿತು.

ಶೈಕ್ಷಣಿಕ ಪ್ರಗತಿ ಸಾಧಿಸುವಂತೆ ಪ್ರಾಂಶುಪಾಲರಿಗೆ ಎಚ್ಚರಿಕೆ ಕೊಟ್ಟ ಜೆಡಿಎಸ್ ಶಾಸಕ

ಫಲಿತಾಂಶ ಕಡಿಮೆಯಾಗಿದ್ದರಿಂದ ಆಕ್ರೋಶ ಹೊರಹಾಕಿದ ಶಾಸಕ ಸುರೇಶ್ ಗೌಡ, ಇದೇ ರೀತಿ ಮುಂದುವರೆದ್ರೆ ಗಂಟುಮೂಟೆ ಕಟ್ಟಿಕೊಂಡು ಹೋಗಿ, ನಿಮಗೆ ಮಾನ ಮರ್ಯಾದೆ ಇಲ್ವಾ ಎಂದು ತರಾಟೆಗೆ ತೆಗೆದುಕೊಂಡರು.

ರಿಸಲ್ಟ್ ಕಡಿಮೆಯಾಗಲು ಕಾರಣ ತಿಳಿಸಲು ಹೋದ ಪ್ರಾಂಶುಪಾಲರಿಗೆ ಬರೀ ಕಾರಣ ಹೇಳಬೇಡಿ ಎಂದು ಎಚ್ಚರಿಕೆ ನೀಡಿದ್ರು. ಶೈಕ್ಷಣಿಕವಾಗಿ ನನ್ನ ಕ್ಷೇತ್ರವನ್ನು ಮಾದರಿಯನ್ನಾಗಿಸುವ ಗುರಿ ನನ್ನದು. ಆದ್ದರಿಂದ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.

ಶಾಲೆಗಳಿಗೆ ಬೈಕ್ ತರುವುದು, ಮೊಬೈಲ್ ಬಳಸುವುದು ಕಂಡುಬಂದ್ರೆ ಶಾಲೆಯ ಮುಖ್ಯಸ್ಥರೆ ಹೊಣೆಗಾರರು. ಜಿಲ್ಲಾಧಿಕಾರಿಗಳ ಆದೇಶ ಪಾಲಿಸುವಂತೆ ಸೂಚನೆ ನೀಡಿದ ಶಾಸಕರು, ಶೈಕ್ಷಣಿಕ ಪ್ರಗತಿಗೆ ಎಚ್ಚರಿಕೆ ‌ವಹಿಸುವಂತೆ ಸೂಚಿಸಿದರು.

ABOUT THE AUTHOR

...view details