ಮಂಡ್ಯ:ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಐದನೇ ದಿನಕ್ಕೆ ಕಾಲಿಟ್ಟಿದೆ. ಸಕ್ಕರೆ ನಾಡಿನಲ್ಲಿ ಇಂದು ಸಹ ಖಾಸಗಿ ವಾಹನಗಳೇ ಓಡಾಟ ನಡೆಸುತ್ತಿವೆ.
ಮಂಡ್ಯ ಜಿಲ್ಲೆಯಲ್ಲಿ ಸಂಚಾರಕ್ಕೆ ಖಾಸಗಿ ವಾಹನಗಳೇ ಗತಿ - ಮಂಡ್ಯ ಸರ್ಕಾರಿ ಬಸ್ ನಿಲ್ದಾಣ
ವೇತನ ಪರಿಷ್ಕರಣೆಗೆ ಒತ್ತಾಯಿಸಿ ನಡೆಸುತ್ತಿರುವ ಸಾರಿಗೆ ನೌಕರರ ಮುಷ್ಕರ ಇಂದೂ ಸಹ ಮುಂದುವರಿದ ಕಾರಣ, ಜಿಲ್ಲೆಯಲ್ಲಿ ಜನರು ಸಂಚಾರಕ್ಕೆ ಖಾಸಗಿ ವಾಹನಗಳನ್ನೇ ಬಳಸುವಂತಾಗಿದೆ.
![ಮಂಡ್ಯ ಜಿಲ್ಲೆಯಲ್ಲಿ ಸಂಚಾರಕ್ಕೆ ಖಾಸಗಿ ವಾಹನಗಳೇ ಗತಿ private buses continuous operation in mandya](https://etvbharatimages.akamaized.net/etvbharat/prod-images/768-512-11362401-thumbnail-3x2-mandya.jpg)
ಮಂಡ್ಯ ಸರ್ಕಾರಿ ಬಸ್ ನಿಲ್ದಾಣ ಸಂಪೂರ್ಣ ಸ್ತಬ್ಧವಾಗಿದೆ. ಬೆಂಗಳೂರು-ಮೈಸೂರು ಕಡೆಗೆ ಜನರನ್ನು ಕರೆದೊಯ್ಯಲು ಖಾಸಗಿ ವಾಹನಗಳು ಸಾಲಾಗಿ ನಿಂತಿವೆ. ಕಳೆದ ನಾಲ್ಕು ದಿನಗಳಿಗೆ ಹೋಲಿಸಿದರೆ ಇಂದು ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಯುಗಾದಿ ಹಬ್ಬ ಸೇರಿ ಸಾಕಷ್ಟು ರಜೆಗಳಿದ್ದರೂ ಬಸ್ ನಿಲ್ದಾಣದ ಕಡೆಗೆ ಪ್ರಯಾಣಿಕರು ಬರುತ್ತಿಲ್ಲ.
ಖಾಸಗಿ ಬಸ್ ಸಿಬ್ಬಂದಿ ಜನರ ಸೇವೆಗೆ ಮುಂದಾಗಿದ್ದಾರೆ. ಆದ್ರೆ ಇದೇ ವೇಳೆ ಅವರು ಕೂಡಾ ಸಂಕಷ್ಟಕ್ಕೆ ಸಿಲುಕಿರುವ ಪರಿಸ್ಥಿತಿ ಎದುರಾಗಿದೆ. ಕಡಿಮೆ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದೇವೆ. ಪ್ರಯಾಣಿಕರು ನಮ್ಮ ಖಾಸಗಿ ವಾಹನಕ್ಕೆ ಬರಲಿ, ನಾವಿರೋದೇ ಜನರ ಸೇವೆಗಾಗಿ ಅಂತಾ ಚಾಲಕರು ಹೇಳುತ್ತಾರೆ.