ಕರ್ನಾಟಕ

karnataka

ETV Bharat / state

ಬ್ರಿಗೇಡ್ ತಂಡದ ಯುವಕರಿಂದ ದೇವಸ್ಥಾನ ಜೀರ್ಣಾದ್ಧಾರ : ತಂಡದ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ - Youth Brigade Youth Team

ಮರಿಯಪ್ಪ ಎಂಬುವರು ಮೃತಪಟ್ಟ ನಂತರ ಯಾವುದೇ ಪೂಜೆ ಇಲ್ಲದೆ ಪಾಳು ಬಿದ್ದಿತ್ತು. ದೇವಾಲಯದ ಗೋಡೆಗಳು ಶಿಥಿಲಾವಸ್ಥೆ ತಲುಪಿದ್ದವು. ಅಷ್ಟೇ ಅಲ್ಲ, ದೇವಾಲಯದ ಸುತ್ತ ಗಿಡ, ಗಂಟೆಗಳ ಬೆಳೆದು ವಿಷ ಜಂತುಗಳ ತಾಣವಾಗಿತ್ತು..

ತಂಡದ ಕಾರ್ಯಕ್ಕೆ ಪ್ರಧಾನಿ ಮೋದಿ ಶ್ಲಾಘನೆ
Prime Minister narendra Modi Appreciated mandya youth work

By

Published : Dec 28, 2020, 7:36 AM IST

ಮಂಡ್ಯ:ಯುವ ಬ್ರಿಗೇಡ್ ತಂಡದ ಯುವಕರು ಗಿಡ,ಗಂಟೆಗಳು ಬೆಳೆದು ಪಾಳು ಬಿದ್ದಿದ್ದ ದೇವಸ್ಥಾನವನ್ನು ಜೀರ್ಣಾದ್ಧಾರ ಮಾಡಿದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಈ ತಂಡದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾಂ ಸಮೀಪ ಕೃಷ್ಣದೇವರಾಯರ ಕಾಲದಲ್ಲಿ ಶಿವನ ದೇವಾಲಯ ನಿರ್ಮಾಣವಾಗಿತ್ತು. ಆರಂಭದಲ್ಲಿ ಇಲ್ಲಿ ಪೂಜೆ-ಪುನಸ್ಕಾರ ಮಾಡಿಕೊಂಡು ಬರಲಾಗುತ್ತಿತ್ತು. ಆದರೆ, 45 ವರ್ಷಗಳಿಂದ ಇಲ್ಲಿ ಪೂಜೆ ನಡೆಯುತ್ತಿರಲಿಲ್ಲ.

ಬ್ರಿಗೇಡ್ ತಂಡದ ಯುವಕರಿಂದ ದೇವಸ್ಥಾನ ಜೀರ್ಣಾದ್ಧಾರ

ಮರಿಯಪ್ಪ ಎಂಬುವರು ಮೃತಪಟ್ಟ ನಂತರ ಯಾವುದೇ ಪೂಜೆ ಇಲ್ಲದೆ ಪಾಳು ಬಿದ್ದಿತ್ತು. ದೇವಾಲಯದ ಗೋಡೆಗಳು ಶಿಥಿಲಾವಸ್ಥೆ ತಲುಪಿದ್ದವು. ಅಷ್ಟೇ ಅಲ್ಲ, ದೇವಾಲಯದ ಸುತ್ತ ಗಿಡ, ಗಂಟೆಗಳ ಬೆಳೆದು ವಿಷ ಜಂತುಗಳ ತಾಣವಾಗಿತ್ತು.

ಬ್ರಿಗೇಡ್ ತಂಡದ ಯುವಕರಿಂದ ದೇವಸ್ಥಾನ ಜೀರ್ಣಾದ್ಧಾರ

ಓದಿ: ಮಂಗಳೂರು ಹಳೆವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ನಿಗೂಢ ವಸ್ತು.. ಆ ಮೇಲೆ ಇಷ್ಟೇ ಆಯ್ತು..

ಇದನ್ನು ಗಮನಿಸಿದ ಶ್ರೀರಂಗಪಟ್ಟಣದ ಯುವ ಬ್ರಿಗೇಡ್‌ನ ಯುವಕರ ತಂಡ, ಸತತ ಎರಡು ತಿಂಗಳುಗಳ ಕಾಲ ಶ್ರಮದಾನ ಮಾಡುವ ಮೂಲಕ ದೇವಾಲಯವನ್ನು ಸಂಪೂರ್ಣ ಜೀರ್ಣೋದ್ಧಾರ ಮಾಡಿದ್ದರು. ಬಳಿಕ ಹೊಸ ಲಿಂಗ ಪ್ರತಿಷ್ಠಾಪಿಸಿ ನಿತ್ಯ ಪೂಜೆ ಪುನಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದಾರೆ. ಈ ಕಾರ್ಯದ ಬಗ್ಗೆ ನಿನ್ನೆ ನಡೆದ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಯುವಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.

ABOUT THE AUTHOR

...view details