ಮಂಡ್ಯ:ಸಕ್ಕರೆ ನಾಡಿನಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ಭಾನುವಾರ ನಡೆಯಲಿದ್ದು, ಜಿಲ್ಲಾಡಳಿತ ಸಕಲ ಸಿದ್ಧತೆ ಕೈಗೊಂಡಿದೆ.
ಪಾಂಡವಪುರ ವಿಭಾಗದ ನಾಲ್ಕು ತಾಲೂಕುಗಳ 104 ಗ್ರಾಪಂನ 1786 ಸ್ಥಾನಗಳ ಪೈಕಿ 185 ಸದಸ್ಯ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಉಳಿದ 1,598 ಸದಸ್ಯ ಸ್ಥಾನಗಳಿಗೆ ಅಂತಿಮವಾಗಿ 4,004 ಮಂದಿ ಕಣದಲ್ಲಿದ್ದಾರೆ.
ಭಾನುವಾರ ಬೆಳಗ್ಗೆ 7 ರಿಂದ ಸಂಜೆ 5 ಗಂಟೆಯುವರೆಗೆ ಮತದಾನ ನಡೆಯಲಿದೆ. ಕೊನೆಯ ಒಂದು ಗಂಟೆಯಲ್ಲಿ ಕೊರೊನಾ ಸೋಂಕಿತರು ಮತದಾನ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಮತದಾರರು, ಮತಗಟ್ಟಿ ಎಷ್ಟು?:ಪಾಂಡವಪುರದಲ್ಲಿ 64,160 ಪುರುಷರು, 64,297 ಮಹಿಳೆಯರು ಹಾಗೂ 3 ಇತರರು ಸೇರಿ ಒಟ್ಟು 1,28 457 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. 58 ಸೇವಾ ಮತದಾರರಿದ್ದು, 916 ಮತಗಟ್ಟೆ ಸಿಬ್ಬಂದಿಯನ್ನು ನೇಮಿಸಿದೆ. 176 ಮತಗಟ್ಟೆಗಳನ್ನು ತೆರೆದಿದ್ದು, ಹೆಚ್ಚುವರಿಯಾಗಿ 23 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 30 ಸೂಕ್ಷ 203 ಸೂಕ್ತ. ಹಾಗೂ 2 ವಲ್ನರಬಲ್ ಮತಗಟ್ಟೆ ಹಾಗೂ ಉಳಿದವು ಸಾಮಾನ್ಯ ಮತಗಟ್ಟೆಗಳನ್ನಾಗಿ ಮಾಡಲಾಗಿದೆ.
ಕೆಆರ್‌ಪೇಟೆಯಲ್ಲಿ 95,448 ಪುರುಷರು, 92,993 ಮಹಿಳೆಯರು, 5 ಇತರರು ಸೇರಿ ಒಟ್ಟು 1,88 446 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. 94 ಸೇವಾ ಮತದಾರರಿದ್ದು, 1,485 ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ. 256 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಹೆಚ್ಚುವರಿಯಾಗಿ 41 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 40 ಸೂಕ್ಷ್ಮ, 34 ಅತಿ ಸೂಕ್ಷ್ಮ, ಉಳಿದವು ಸಾಮಾನ್ಯ ಮತಗಟ್ಟೆಗಳಾಗಿವೆ.
ಶ್ರೀರಂಗಪಟ್ಟಣದಲ್ಲಿ 62,871, ಪುರುಷರು, 61,909 ಮಹಿಳೆಯರು, 6 ಇತರರು ಸೇರಿ ಒಟ್ಟು 1,26,780 ಮಂದಿ ಮತದಾನದ ಹಕ್ಕು ಹೊಂದಿದ್ದಾರೆ. 56 ಸೇವಾ ಮತದಾರರಿದ್ದು, 1,150 ಮತಗಟ್ಟೆ ಸಿಬ್ಬಂದಿ ನೇಮಿಸಿದೆ.163 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಹೆಚ್ಚುವರಿಯಾಗಿ 36 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 30 ಸೂಕ್ಷ್ಮ, 18 ಅತಿಸೂಕ್ಷ್ಮ,ವಲರಬಲ್, ಉಳಿದವು ಸಾಮಾನ್ಯ ಮತಗಟ್ಟೆಗಳಾಗಿವೆ.
ನಾಗಮಂಗಲದಲ್ಲಿ 69,184 ಪುರುಷರು, 68,148 ಮಹಿಳೆಯರು, 15 ಇತರರು ಸೇರಿ ಒಟ್ಟು 1,37,347 ಮತದಾರರು ಹಕ್ಕು ಹೊಂದಿದ್ದಾರೆ. 64 ಸೇವಾ ಮತದಾರರಿದ್ದು, 1,156 ಮತಗಟ್ಟೆ ಸಿಬ್ಬಂದಿ ನಿಯೋಜಿಸಿದೆ. 224 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಹೆಚ್ಚುವರಿಯಾಗಿ 27 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 63 ಸೂಕ್ಷ್ಮ 4 ಅತಿ ಸೂಕ್ಷ್ಮ, 4 ವಲರಬಲ್, ಉಳಿದವು ಸಾಮಾನ್ಯ ಮತಗಟ್ಟೆಗಳಾಗಿರುತ್ತವೆ.