ಮಂಡ್ಯ: ಕೇಂದ್ರ ಸರ್ಕಾರದ ಎನ್‌ಆರ್‌ಸಿ ಹಾಗೂ ಸಿಎಬಿ ವಿರುದ್ಧ ಸಕ್ಕರೆ ನಗರಿಯಲ್ಲಿ ಮುಸಲ್ಮಾನರು ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಕೇಂದ್ರದ ವಿರುದ್ಧ ವಿನೂತನ ಹೋರಾಟ ನಡೆಸಿದ್ದಾರೆ.
ಧರ್ಮ ಗುರುಗಳ ಸಮ್ಮುಖದಲ್ಲಿ ಪ್ರಾರ್ಥನೆ ಸಲ್ಲಿಸಿದ ನೂರಾರು ಮಂದಿ, ಪ್ರಾರ್ಥನಾ ಗೋಡೆಗೆ ಕಾಯ್ದೆ ವಿರೋಧಿಸಿ ಪ್ಲೆಕ್ಸ್ ಅಳವಡಿಸಿ ಪ್ರಾರ್ಥನೆ ಸಲ್ಲಿಸಿ ವಿರೋಧ ವ್ಯಕ್ತಪಡಿಸಿದರು.
ಪೌರತ್ವ ಕಾಯ್ದೆ ವಿರೋಧಿಸಿ ಮಂಡ್ಯದಲ್ಲಿ ಮುಸಲ್ಮಾನರಿಂದ ನಮಾಜ್! - ಪೌರತ್ವ ಕಾಯ್ದೆ
ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದು ಮಂಡ್ಯದಲ್ಲಿ ಮುಸಲ್ಮಾನರು ನಮಾಜ್ ಮಾಡುವ ಮೂಲಕ ಕೇಂದ್ರದ ವಿರುದ್ದ ಕಿಡಿ ಕಾಡಿದ್ದಾರೆ.
ಪೌರತ್ವ ಕಾಯ್ದೆ ವಿರೋಧಿಸಿ ಮಂಡ್ಯದಲ್ಲಿ ಮುಸಲ್ಮಾನರಿಂದ ನಮಾಜ್!
ಪ್ರತಿಭಟನಾ ಪ್ರಾರ್ಥನೆ ಹಿನ್ನಲೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಿತ್ತು. ಪ್ರಾರ್ಥನಾ ಸ್ಥಳಕ್ಕೆ ಡಿಸಿ ವೆಂಕಟೇಶ್, ಎಸ್‌ಪಿ ಪರಶುರಾಮ್ ಭೇಟಿ ನೀಡಿ ಮನವೊಲಿಕೆ ಮಾಡಿದರು.