ಕರ್ನಾಟಕ

karnataka

ETV Bharat / state

ಕೆ ಆರ್​ ಪೇಟೆಯಲ್ಲಿ ಪೋಸ್ಟರ್ ವಾರ್​:  ಘರ್ಷಣೆ ತಪ್ಪಿಸಲು ಪೊಲೀಸ್​ ಸರ್ಪಗಾವಲು - Poster War at the KR Pate

ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾಗಿದ್ದು, ಸ್ಟಿಕ್ಕರ್ ಅಂಟಿಸಿ ಎದುರಾಳಿಗಳಿಗೆ ಮುಜುಗುರ ತರಿಸಲಾಗುತ್ತಿದೆ. ಕೊನೆ ಕ್ಷಣದ ಕಸರತ್ತು ಈಗ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿ ಸ್ಟಿಕ್ಕರ್ ವಾರ್​ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಲಾಗಿದೆ.

ಕೆ ಆರ್​ ಪೇಟೆಯಲ್ಲಿ ಪೋಸ್ಟರ್  ವಾರ್, Poster War at the KR Pate
ಕೆ ಆರ್​ ಪೇಟೆಯಲ್ಲಿ ಪೋಸ್ಟರ್ ವಾರ್

By

Published : Dec 4, 2019, 7:37 AM IST

Updated : Dec 4, 2019, 8:27 AM IST

ಮಂಡ್ಯ: ಬಿಜೆಪಿ ಅಭ್ಯರ್ಥಿ ವಿರುದ್ಧ ಕೆ.ಆರ್.ಪೇಟೆಯಲ್ಲಿ ಫೊಸ್ಟರ್ ವಾರ್ ಶುರುವಾಗಿದೆ. ಕೆಲವು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಬಾಗಿಲಿಗೆ ಫೊಸ್ಟರ್ ಅಂಟಿಸಿ ಚಳವಳಿ ಆರಂಭ ಮಾಡಲಾಗಿದೆ.

ಜೆಡಿಎಸ್ ಪ್ರಾಬಲ್ಯವಿರುವ ಕೆಲವು ಗ್ರಾಮಗಳಲ್ಲಿ ಮನೆಯ ಬಾಗಿಲಿಗೆ ಸುಪ್ರೀಂಕೋರ್ಟ್ ಅನರ್ಹಗೊಳಿಸಿರುವ ಶಾಸಕನಿಗೆ ನಮ್ಮ ಮನೆಗೆ ಪ್ರವೇಶವಿಲ್ಲ ಎಂದು ಸ್ಟಿಕ್ಕರ್ ಅಂಟಿಸಲಾಗಿದೆ. ಈ ಸ್ಟಿಕ್ಕರ್ ವಾರ್ ಈಗ ಹೊಸ ಸಂಘರ್ಷಕ್ಕೆ ಕಾರಣವಾಗಿದೆ.

ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾಗಿದ್ದು, ಸ್ಟಿಕ್ಕರ್ ಅಂಟಿಸಿ ಎದುರಾಳಿ ಕಾರ್ಯಕರ್ತರಿಗೆ ಮುಜುಗರ ತರಿಸಲಾಗುತ್ತಿದೆ. ಕೊನೆ ಕ್ಷಣದ ಕಸರತ್ತು ಈಗ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿ ಸ್ಟಿಕ್ಕರ್ ವಾರ್ ಬಿಜೆಪಿ-ಜೆಡಿಎಸ್ ಕಾರ್ಯಕರ್ತರ ನಡುವೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ ಎಂದು ಹೇಳಲಾಗಿದೆ.

ಕೆ ಆರ್​ ಪೇಟೆಯಲ್ಲಿ ಪೋಸ್ಟರ್ ವಾರ್

ಈಗಾಗಲೇ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಎಲ್ಲ ಗ್ರಾಮಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದು, ಅರೆ ಸೇನಾ ಪಡೆ ಸೇರಿದಂತೆ ಕೆಎಸ್ಆರ್ಪಿ, ಡಿಎಆರ್ ತುಕಡಿಗಳ ಜೊತೆಗೆ ಸಿವಿಲ್ ಪೊಲೀಸರನ್ನು ನಿಯೋಜನೆ ಮಾಡಿದೆ.

Last Updated : Dec 4, 2019, 8:27 AM IST

ABOUT THE AUTHOR

...view details