ಮಂಡ್ಯ:ನಗರದ ಕಲ್ಲಹಳ್ಳಿಯ ವಿವಿ ನಗರದ 23ನೇ ಕ್ರಾಸ್ ನಲ್ಲಿ ಮುಳ್ಳಂದಿಗಳು ಕಂಡು ಬಂದಿವೆ. ಅದರಲ್ಲಿ ಒಂದು ಮುಳ್ಳು ಹಂದಿಯನ್ನು ಅರಣ್ಯ ಇಲಾಖೆ ಮತ್ತು ನಗರಸಭೆ ಸಿಬ್ಬಂದಿ ಸೇರಿ ಸೆರೆ ಹಿಡಿದಿದ್ದಾರೆ.
ಸ್ಥಳೀಯರಾದ ಅನೂಪ್ ಅವರು ಮಾತನಾಡಿದರು ಬಡಾವಣೆಯ ನಿವಾಸಿ ಅನೂಪ್ ಮಾತನಾಡಿ, ಇತ್ತೀಚಿಗೆ ಮಂಡ್ಯ ಜಿಲ್ಲೆಯಲ್ಲಿ ವನ್ಯ ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಅದರಂತೆ ನಗರ ಪ್ರದೇಶದಲ್ಲಿ ನಿವೇಶನಗಳನ್ನು ಸ್ವಚ್ಛವಾಗಿಟ್ಟುಕೊಳ್ಳದೇ ಗಿಡಗಂಟಿಗಳು ಬೆಳೆದಿರುವುದರಿಂದ ವನ್ಯಪ್ರಾಣಿಗಳಿಗೆ ಆಶ್ರಯ ತಾಣವಾಗಿದೆ.
ನಮ್ಮ ಬಡಾವಣೆಯಲ್ಲಿ 3-4 ಮುಳ್ಳುಹಂದಿಗಳು ಓಡಾಡುವ ಬಗ್ಗೆ ಬೆಳಗ್ಗೆ ವಾಕ್ ಮಾಡುವ ಜನರೇ ಹೇಳಿದ್ದರು. ಅದರಂತೆ ನಿನ್ನೆ ರಾತ್ರಿ 8.30 ರಲ್ಲಿ ಚರಂಡಿಯೊಳಗೆ ಮುಳ್ಳುಹಂದಿ ಪ್ರತ್ಯಕ್ಷವಾದ ಕೂಡಲೇ ಸ್ಥಳೀಯ ನಾಗರಿಕರು ಮಾಹಿತಿ ನೀಡಿದರು. ಆಗ ನಾವು ಅರಣ್ಯ ಇಲಾಖೆ ಹಾಗೂ ನಗರಸಭೆ ಸಿಬ್ಬಂದಿಗೆ ಕರೆ ಮಾಡಿದೆವು. ಅವರು ಬಲೆ ತಂದು ಮುಳ್ಳುಹಂದಿ ಹಿಡಿದಿದ್ದಾರೆ. ಇದನ್ನು ಅರಣ್ಯ ಇಲಾಖೆಯವರು ಅರಣ್ಯ ಪ್ರದೇಶಕ್ಕೆ ಬಿಡಲಿದ್ದಾರೆ ಎಂದರು.
ಓದಿ:ಸುವರ್ಣ ಸಂಭ್ರಮದಲ್ಲಿ ಬಂಡೀಪುರ ಟೈಗರ್ ರಿಸರ್ವ್.. ವಿಭಿನ್ನ ಕಾರ್ಯಕ್ರಮಕ್ಕೆ ಸಜ್ಜಾದ ಅರಣ್ಯ ಇಲಾಖೆ