ಮಂಡ್ಯ:ಜಿಲ್ಲೆಯಲ್ಲಿ ಆಲಕೆರೆ ಸುತ್ತಮುತ್ತ ರೈತರು ಬೆಳೆದ ಹಲವು ತರಕಾರಿ ಬೆಳೆಗಳು ಕಾಯಿ ಬಿಡದೆ ರೈತರು ಕಂಗಾಲಾಗಿದ್ದಾರೆ.
ರೈತರಿಗೆ ಕಳಪೆ ಬಿತ್ತನೆ ಬೀಜ ಮಾರಾಟ: ಬೆಳೆ ಬರದೆ ಕಂಗಾಲಾದ ರೈತರು - ಮಂಡ್ಯ ಸುದ್ದಿ
ಮಂಡ್ಯ ಜಿಲ್ಲೆಯ ಆಲಕೆರೆ ಸುತ್ತಮುತ್ತ ರೈತರು ಬೆಳೆದ ಹಲವು ತರಕಾರಿ ಬೆಳೆಗಳು ಕಾಯಿ ಬಿಟ್ಟಿಲ್ಲ. ಇದಕ್ಕೆ ಅವಧಿ ಮುಗಿದ ಬಿತ್ತನೆ ಬೀಜ ಮಾರಾಟವೇ ಕಾರಣ ಎಂದು ಆರೋಪಿಸಿದ್ದಾರೆ.
ಮಂಡ್ಯ ತಾಲೂಕಿನ ಆಲಕೆರೆ ಗ್ರಾಮದ ರೈತ ಮರಿಲಿಂಗಪ್ಪ, ಖಾಸಗಿ ಕಂಪನಿಯ 121 ತಳಿಯ ಬೆಂಡೆಕಾಯಿ ಬಿತ್ತನೆ ಬೀಜ ತಂದು ಹಾಕಿದ್ದರು. ಆದರೆ ಒಂದೂವರೆ ಎಕರೆಯ ಶೇ. 95% ಗಿಡಗಳ ಎಲೆಗಳು ಬಿಳಿ ಬಣ್ಣಕ್ಕೆ ತಿರುಗಿ ರೋಗಗ್ರಸ್ತವಾಗಿವೆ. 50 ಸಾವಿರ ವೆಚ್ಚ ಮಾಡಿರುವ ರೈತ, ಈಗ ಕಾಯಿ ಬಾರದೆ ಕಂಗಾಲಾಗಿದ್ದು, ಇದಕ್ಕೆ ಅವಧಿ ಮುಗಿದ ಬಿತ್ತನೆ ಬೀಜ ಮಾರಾಟವೇ ಕಾರಣ ಎಂದು ಆರೋಪಿಸಿದ್ದಾನೆ.
ಇನ್ನು, ಪಡವಲಕಾಯಿ ಬೆಳೆದ ರೈತರದ್ದೂ ಇದೇ ಪರಿಸ್ಥಿತಿ ಇದ್ದು, ಗಿಡಗಳಲ್ಲಿ ಕಾಯಿಗಳೇ ಬಂದಿಲ್ಲ. ಹೀಗಾಗಿ ರೈತರಿಗೆ ಪರಿಹಾರ ನೀಡಬೇಕು. ಕಳಪೆ ಬೀಜ ಪೂರೈಕೆ ಮಾಡಿದ ಕಂಪನಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.