ಸಚಿವ ಚಲುವರಾಯಸ್ವಾಮಿ ಮಾಧ್ಯಮದವರ ಜೊತೆ ಮಾತನಾಡಿದರು. ಮಂಡ್ಯ:ಕೆ ಆರ್‌ಎಸ್‌ನಿಂದ ತಮಿಳುನಾಡಿಗೆ ನೀರು ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಕಾವೇರಿ ನೀರು ಕಮೀಟಿ ಹಾಗೂ ಲೀಗಲ್ ಟೀಂ ಜೊತೆ ಸಂಬಂಧ ಪಟ್ಟ ಸಚಿವರು ಮಾತನಾಡಿದ್ದಾರೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮದ್ದೂರಿನ ಸಾದೊಳಲು ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೀರು ಇದ್ದರೆ ತಾನೇ ಬಿಡೋಕೆ ಸಾಧ್ಯ. ನಮ್ಮ ಪರಿಸ್ಥಿತಿ ಏನು ಇದೆ ಅದನ್ನು ನೋಡಬೇಕಿದೆ. ನಮ್ಮಲ್ಲಿ ನೀರು ಲಭ್ಯ ಇದ್ರೆ ಹಿಡಿದು ಇಟ್ಟುಕೊಳ್ಳಲು ಆಗಲ್ಲ. ನಮ್ಮಲ್ಲಿ ಸದ್ಯ ನೀರು ಲಭ್ಯವಿಲ್ಲ. ಈಗಾಗಲೇ ಬೆಳೆಗೆ ನೀರು ಕೊಟ್ಟಿದ್ದೇವೆ. ಈಗ ಇರುವುದು ಕುಡಿಯುವ ನೀರಿಗೆ ಮಾತ್ರ. ಲೀಗಲ್ ಟೀಂ ಮೂಲಕ ಎರಡು ಕಮಿಟಿಗೆ ತಿಳಿಸಿದ್ದೇವೆ ನೀರು ಇಲ್ಲ. ರೈತರು ಹೋರಾಟ ಮಾಡ್ತಿದ್ದು, ಹೋರಾಟವನ್ನು ಕೈ ಬಿಡಬೇಕು ಎಂದು ಮನವಿ ಮಾಡ್ತೇವೆ ಎಂದು ತಿಳಿಸಿದರು.
ಡಿ.ಕೆ.ಶಿವಕುಮಾರ್ ಸಿಬಿಐ ಕೇಸ್ ಸರ್ಕಾರ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯೆಸಿ, ಸರ್ಕಾರದ ನಿರ್ಧಾರವೇ ಅಂತಿಮ ತೀರ್ಮಾನ. ಕೋರ್ಟ್‌ನಲ್ಲಿ ಆ ಬಗ್ಗೆ ಎರಡು ಮೂರು ಹಂತದಲ್ಲಿ ತನಿಖೆ ಆಗ್ತಾ ಇದೆ. ಅದನ್ನು ಕಳೆದ ಸರ್ಕಾರಿ ಅಡಿಶನಲ್ ಆಗಿ ಸಿಬಿಐಗೆ ಕೊಟ್ಟಿತು.
ಲೀಗಲ್ ಸಮಸ್ಯೆ ಇರುವ ಕಾರಣ ವಾಪಸ್ ತೆಗೆದುಕೊಂಡಿದ್ದಾರೆ ಎಂದು ವಿವರಿಸಿದರು.
ಒತ್ತುವರಿಯಾಗಿದ್ರೆ ಹೆಚ್ಡಿಕೆ ದಾಖಲೆ ಒದಗಿಸಲಿ:ಬಿಡದಿಯಲ್ಲಿಕೆರೆ ಒತ್ತುವರಿ ಸಂಬಂಧಿಸಿದಂತೆ ದೂರು ದಾಖಲು ಆದರೂ ಮಾಡಲಿ. ಅದು ಬೇರೆ ಮಾಲೀಕನಿಂದ ಖರೀದಿ ಆಗಿರುವ ಜಾಗವದು. ಬಿಡದಿಯಲ್ಲಿ ಎಷ್ಟು ಒತ್ತುವರಿ ಆಗಿದೆ ಅಂತಾ ಕುಮಾರಸ್ವಾಮಿ ಕ್ಲಾರಿಟಿ ಕೊಡಲಿ. ನಂದ ಜಮೀನು ಎಲ್ಲೆಲ್ಲಿ ಇದೆ ಎಂದು ಏಜೆನ್ಸಿ ಬಿಟ್ಟು ಹುಡುಕಿಸುತ್ತಿದ್ದಾರೆ. ಪಾಪ ಅವರಿಗೆ ನನ್ನ ಹಾಗೂ ನಮ್ಮ ಸರ್ಕಾರವನ್ನು ಸಹಿಸಲು ಆಗುತ್ತಿಲ್ಲ. ನನಗೂ ಅವರ ವೇದನೆ ನೋಡಿ ಅಯ್ಯೋ ಅನ್ನಿಸುತ್ತದೆ. ಬಾಯಿ ಬಂದ ಹಾಗೆ ಎಲ್ಲರ ಬಗ್ಗೆ ಲಘುವಾಗಿ ಮಾತಾಡುತ್ತಾರೆ. ಸಿಎಂ ಆದವರು ದೇಶ ಆಳಿದ ಕುಟುಂಬದವರು ಆಡುವ ಮಾತಿನಲ್ಲಿ ಇತಿ-ಮಿತಿ ಇರಬೇಕು ಎಂದು ಹೆಚ್ಡಿಕೆ ವಿರುದ್ದ ಕಿಡಿಕಾರಿದರು.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು , ಅವರ ಪಕ್ಷದ ಅಭ್ಯರ್ಥಿಯೂ ಅವರೇ ಆಯ್ಕೆ ಮಾಡಬೇಕು. ಯಾರನ್ನು ನಿಲ್ಲಿಸುತ್ತಾರೆ ನಿಲ್ಲಿಸಲಿ. ಜೆಡಿಎಸ್ ಬಿಜೆಪಿ ಒಂದಾಗಿದೆ. ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಜೆಡಿಎಸ್ ಫೈಟ್ ಇರೋ ಕಾರಣ ಜೆಡಿಎಸ್‌ಗೆ ಬಿಟ್ಟುಕೊಡಬಹುದು. ನನ್ನ ಪತ್ನಿಯನ್ನು ಅಭ್ಯರ್ಥಿ ಮಾಡಲು ಆಲೋಚನೆ ಇಲ್ಲ. ನಮ್ಮ ಪಕ್ಷದ ಸೂಕ್ತ ಅಭ್ಯರ್ಥಿಯನ್ನು ನಾವು ಹಾಕುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಇದನ್ನೂಓದಿ:ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ನಿರ್ಣಯ ಕಾನೂನು ಬಾಹಿರ: ಬಿ.ವೈ. ವಿಜಯೇಂದ್ರ