ಮಂಡ್ಯ:ಭಾರತಿ ಕಾಲೇಜು ಆವರಣದಲ್ಲಿ ದಿ.ಜಿ. ಮಾದೇಗೌಡರ ಮೃತದೇಹದ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ರಾಜಕೀಯ ಗಣ್ಯರು, ಸ್ವಾಮೀಜಿಗಳು ಹಾಗೂ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್, ಸಚಿವ ನಾರಾಯಣಗೌಡ, ಸಿನಿಮಾ ನಿರ್ದೇಶಕ ಪ್ರೇಮ್ ಸೇರಿದಂತೆ ಹಲವರು ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಆದಿಚುಂಚನಗಿರಿ ಶ್ರೀಗಳು, ಮಾದೇಗೌಡರಿಗೆ ಆಧ್ಯಾತ್ಮಿಕವಾಗಿ ಒಲವಿತ್ತು. ಅವರು ಮಠಕ್ಕೂ ಬರುತ್ತಿದ್ದರು. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದರು.
ಮಾಜಿ ಸಂಸದ ಮಾದೇಗೌಡರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ಗಣ್ಯರು ಮಾಜಿ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿ, ಮಾದೇಗೌಡರ ಕಾವೇರಿ ಹೋರಾಟವನ್ನು ಎಲ್ಲರೂ ನೆನೆಯಬೇಕು. ಅವರ ಹೋರಾಟ ಎಲ್ಲರಿಗೂ ಸ್ಫೂರ್ತಿಯಾಗಬೇಕು. ಮಂಡ್ಯ ಅಭಿವೃದ್ಧಿ ವಿಚಾರದಲ್ಲೂ ಶ್ರಮವಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಇದನ್ನೂ ಓದಿ:ಮಾದೇಗೌಡರು ನಮಗೆ ತಂದೆಯ ಸಮಾನರಾಗಿದ್ದರು: ಅಂತಿಮ ದರ್ಶನ ಪಡೆದು ಸಂಸದೆ ಸುಮಲತಾ ಕಂಬನಿ