ಮಂಡ್ಯ:ಇತ್ತೀಚಿನ ವರ್ಷಗಳಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ಮರಳು ಸಿಗುವುದೇ ದೊಡ್ಡ ಸವಾಲಾಗಿದೆ. ಸಿಕ್ಕರೂ ಸಾವಿರಾರು ರೂಪಾಯಿ ವ್ಯಯಿಸಬೇಕಿದೆ. ಹೀಗಾಗಿಯೇ ಮರಳಿಗೂ ಚಿನ್ನದ ಬೆಲೆ ಬಂದಿದೆ. ಇದರಿಂದ ಹಳ್ಳಿ ಹಳ್ಳಿಗೂ ಮರಳು ಮಾಫಿಯಾ ಹರಡಿಕೊಂಡಿದೆ.
ಇದೀಗ ಸಕ್ಕರೆ ನಾಡು ಮಂಡ್ಯದಲ್ಲಿ ಫಿಲ್ಟರ್ ಮರಳು ದಂಧೆ ಆರೋಪ ಕೇಳಿ ಬಂದಿದೆ. ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿರುವ ಕಿರಬನಕಟ್ಟೆ ಕೆರೆ ಬಳಿ ಹಲವು ವರ್ಷಗಳಿಂದ ಮರಳು ಫಿಲ್ಟರ್ ದಂಧೆ ನಡೆಸಲಾಗ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಕೆರೆ ಪಕ್ಕದ ತಮ್ಮ ಜಮೀನಿಗೆ ರಾಶಿ ರಾಶಿ ಮಣ್ಣನ್ನ ಹೊರಗಿನಿಂದ ತಂದು ಶೇಖರಣೆ ಮಾಡಿ ಬಳಿಕ ಕೆರೆ ದಡದಲ್ಲಿ ಗುಂಡಿ ನಿರ್ಮಿಸಿ ಅಲ್ಲಿ ಮಣ್ಣನ್ನು ಫಿಲ್ಟರ್ ಮಾಡಲಾಗುತ್ತಿದೆ.
ಪ್ರತಿನಿತ್ಯ ಫಿಲ್ಟರ್ ಆಗುವ ಮರಳನ್ನು 20ಕ್ಕೂ ಟ್ರಾಕ್ಟರ್ಗಳಲ್ಲಿ ಮಂಡ್ಯ, ರಾಮನಗರ, ಬೆಂಗಳೂರು ನಗರಗಳಿಗೆ ರವಾನಿಸುವ ಮೂಲಕ ಲಕ್ಷಾಂತರ ಹಣ ಸಂಪಾದಿಸುತ್ತಿದ್ದಾರೆ ಎನ್ನಲಾಗಿದೆ.