ಮಂಡ್ಯ: ಬೆಳ್ಳಂಬೆಳಗೆ ಪಿಎಫ್ಐ ಕಾರ್ಯಕರ್ತರ ಮನೆ ಮೇಲೆ ಪೊಲೀಸರ ದಾಳಿ ನಡೆಸಿ ಪಿಎಫ್ಐನ ಮಂಡ್ಯ ಜಿಲ್ಲಾಧ್ಯಕ್ಷನನ್ನು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಪಿಎಫ್ಐ ಜಿಲ್ಲಾಧ್ಯಕ್ಷ ಪೊಲೀಸ್ ವಶಕ್ಕೆ - ಮಂಡ್ಯದಲ್ಲಿ ಪಿಎಫ್ಐ ಕಾರ್ಯಕರ್ತರ ಮನೆ ಮೇಲೆ ದಾಳಿ
ಮಂಡ್ಯದಲ್ಲಿ ಬೆಳಗ್ಗೆ 4 ಗಂಟೆಗೆ ಪಿಎಫ್ಐ ಕಾರ್ಯಕರ್ತರ ಮನೆ ಮೇಲೆ ದಾಳಿನಡೆಸಿರುವ ಪೊಲೀಸರು ಪಿಎಫ್ಐ ಜಿಲ್ಲಾಧ್ಯಕ್ಷನನ್ನು ವಶಕ್ಕೆ ಪಡೆದಿದ್ದಾರೆ.
ಮಂಡ್ಯ ಪಿಎಫ್ಐ ಜಿಲ್ಲಾಧ್ಯಕ್ಷ
ಸಯ್ಯದ್ ಇರ್ಫಾನ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದ್ದು, ಸಮಾಜದ ಸ್ವಾಸ್ಥ್ಯ ಕೆಡಿಸಿ, ಅಶಾಂತಿ ವಾತಾವರಣ ಸೃಷ್ಟಿಸಿರುವ ಆರೋಪ ಹಿನ್ನೆಲೆಯಲ್ಲಿ ಇರ್ಫಾನ್ ಅವರ ಮನೆ ಮೇಲೆ ಬೆಳಗ್ಗೆ 4 ಗಂಟೆಗೆ ಪೊಲೀಸರು ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ವಿಜಯಪುರ ಪೊಲೀಸರ ವಶದಲ್ಲಿ ಪಿಎಫ್ಐ ಸಂಘಟನೆ ಜಿಲ್ಲಾಧ್ಯಕ್ಷ