ಮಂಡ್ಯ: ಅನಗತ್ಯ ಸಂಚಾಚರಕ್ಕೆ ಬ್ರೇಕ್ ಹಾಕಿದ್ದರೂ ರಸ್ತೆಗಿಳಿದ ಸವಾರರಿಗೆ ಪೊಲೀಸರು ಬಸ್ಕಿ ಹೊಡೆಸಿದ್ದಾರೆ. ಇನ್ನೂ ಕೆಲವರ ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಅನಗತ್ಯ ಸಂಚಾರ.. ಬೈಕ್ ಸವಾರರಿಗೆ ರಸ್ತೆ ಮಧ್ಯೆ ಬಸ್ಕಿ ಹೊಡೆಸಿದ ಪೊಲೀಸರು.. - corona virus in madya
ಮಂಡ್ಯ ಜಿಲ್ಲೆ ಮಳವಳ್ಳಿ ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ. ಆದರೂ, ಅನಗತ್ಯ ಸಂಚಾರ ಮಾಡುತ್ತಿದ್ದ ಬೈಕ್ ಸವಾರರಿಗೆ ರಸ್ತೆಯಲ್ಲಿಯೇ ಶಿಕ್ಷೆ ವಿಧಿಸಿದರು.
ಬೈಕ್ ಸವಾರರಿಗೆ ರಸ್ತೆಯಲ್ಲಿಯೇ ಶಿಕ್ಷೆ
ಮಳವಳ್ಳಿ ಪಟ್ಟಣದಲ್ಲಿ ಈಗಾಗಲೇ 4 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಜಾರಿಯಾದ್ರೂ ಅನಾವಶ್ಯಕವಾಗಿ ವಾಹನಗಳಲ್ಲಿ ಓಡಾಡುವವರ ಸಂಖ್ಯೆ ಜಾಸ್ತಿಯಾಗಿದೆ. ಇಂದು 100ಕ್ಕೂ ಹೆಚ್ಚು ಬೈಕ್ ಸವಾರರಿಗೆ ರಸ್ತೆಯಲ್ಲಿ ಎಚ್ಚರಿಕೆ ನೀಡಲಾಯಿತು. ಜತೆಗೆ ರಸ್ತೆ ಮಧ್ಯೆ ನಿಲ್ಲಿಸಿ ಪೊಲೀಸರು ಬಸ್ಕಿ ಹೊಡೆಸಿದ್ದಾರೆ. ಕೊರೊನಾ ತಡೆಗೆ ತಾಲೂಕಿನಾದ್ಯಂತ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮವನ್ನ ಪೊಲೀಸರು ತೆಗೆದುಕೊಂಡಿದ್ದಾರೆ.