ಮಂಡ್ಯ:ಜಿಲ್ಲೆಯ ಸಂಜಯ್ ವೃತ್ತದಲ್ಲಿ ಯುವಕನೋರ್ವ ಟ್ರಾಫಿಕ್ ಪೊಲೀಸರೊಬ್ಬರನ್ನು ಅವಾಚ್ಯ ಪದಗಳಿಂದ ನಿಂದಿಸಿರುವ ಘಟನೆ ನಡೆದಿದೆ. ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗನೂರು ಯುವಕ ವಿನೋದ್ ತಾಯಿಯೊಂದಿಗೆ ಬೈಕ್ನಲ್ಲಿ ಆಸ್ಪತ್ರೆಗೆ ಹೋಗುತ್ತಿದ್ದ. ಈ ವೇಳೆ ಆತನನ್ನು ಅಡ್ಡಗಟ್ಟಿರುವ ಟ್ರಾಫಿಕ್ ಪೊಲೀಸ್, ಹೆಲ್ಮೆಟ್ ಧರಿಸದ ಕಾರಣ ದಂಡ ವಿಧಿಸಿದ್ದಾರೆ. ಈ ವೇಳೆ ಘಟನೆ ನಡೆದಿದೆ.
ಎಷ್ಟೂ ಬೇಕಾದರು ದಂಡ ಕಟ್ಟುತ್ತೇನೆ ಎಂದು ಯುವಕ ಹೇಳಿದರೂ ಸಹ ಆ ಪೊಲೀಸ್ ಬೈಕ್ ಕೀ ಕಿತ್ತುಕೊಂಡು, ಯುವಕ ವಿನೋದ್ನನ್ನು ಸತಾಯಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಮಧ್ಯೆ ಯುವಕನ ತಾಯಿ ಅಸ್ವಸ್ಥರಾಗಿ, ಬೈಕ್ನಿಂದ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡ ಯುವಕ ಸಹನೆ ಕಳೆದುಕೊಂಡಿದ್ದು, ಪೊಲೀಸ್ ಅನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾನೆ. ಆಗ ಬೈಕ್ ಸವಾರ ಹಾಗು ಪೊಲೀಸ್ ನಡುವೆ ಮಾತಿನ ಚಕಮಕಿ ನಡೆದಿದೆ.