ಕರ್ನಾಟಕ

karnataka

ETV Bharat / state

ಶಾಸಕ ನಾರಾಯಣಗೌಡ ಎಲ್ಲಿದ್ದಾರೆ ದಯವಿಟ್ಟು ಹುಡುಕಿಕೊಡಿ: ರೈತನ ಆಕ್ರೋಶ - undefined

ರೆಬೆಲ್ ಶಾಸಕ ಕೆ.ಸಿ.ನಾರಾಯಣಗೌಡ ವಿರುದ್ಧ ಕ್ಷೇತ್ರದ ರೈತನೊಬ್ಬ ಆಕ್ರೋಶ ಹೊರಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್​ ವೈರಲ್​ ಆಗಿದೆ.

ರೈತ

By

Published : Jul 13, 2019, 3:32 PM IST

ಮಂಡ್ಯ:ರೆಬೆಲ್ ಶಾಸಕ ಕೆ.ಸಿ.ನಾರಾಯಣಗೌಡ ವಿರುದ್ಧ ಕ್ಷೇತ್ರದ ರೈತನೊಬ್ಬ ಆಕ್ರೋಶ ಹೊರಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಿಮ್ಮನ್ನು ಗೆಲ್ಲಿಸಿದ್ದು ಯಾರು ಎಂದು ಪ್ರಶ್ನೆ ಮಾಡೋದರ ಜೊತೆಗೆ ಸಿಎಂ ಕುಮಾರಸ್ವಾಮಿ ಪರ ಬ್ಯಾಟಿಂಗ್ ಮಾಡಿದ್ದಾನೆ. ಹೊಲದಲ್ಲಿ ನಿಂತು ವಿಡಿಯೋ ಮಾಡಿರುವ ರೈತ, ಶಾಸಕ ನಾರಾಯಣಗೌಡನನ್ನು ಏಕವಚನದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾನೆ.

ರೈತ

ನಾರಾಯಣಗೌಡ ಎಲ್ಲಿದ್ದಾನೆ ಹುಡುಕಿಕೊಡಿ. ಈತನನ್ನು ಮುಂಬೈ ಜನ ವೋಟ್ ಹಾಕಿ ಗೆಲ್ಲಿಸಿದ್ರಾ ಅಥವಾ ಮಂಡ್ಯ ಜನ ವೋಟ್ ಹಾಕಿ ಆಯ್ಕೆ ಮಾಡಿದ್ದಾರಾ ಅಂತಾ ಪ್ರಶ್ನೆ ಮಾಡಿದ್ದಾನೆ. ಜನರ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಳ್ಳಬೇಕಿತ್ತು. ಅದನ್ನು ಬಿಟ್ಟು ಹೀಗೆ ರಾಜೀನಾಮೆ ಕೊಟ್ಟು ಮುಂಬೈ ಸೇರುವ ಅವಶ್ಯಕತೆ ಏನು ಎಂದು ಪ್ರಶ್ನೆ ಮಾಡಿದ್ದಾನೆ. ಅಲ್ಲದೆ ಅವರ ರಾಜೀನಾಮೆ ಅಂಗೀಕರಿಸಬೇಡಿ ಎಂದು ಮನವಿ ಮಾಡಿದ್ದಾನೆ.

For All Latest Updates

TAGGED:

ABOUT THE AUTHOR

...view details