ಕರ್ನಾಟಕ

karnataka

ETV Bharat / state

ಆನ್‌ಲೈನ್ ಮೂಲಕ ಪಿತೃತರ್ಪಣ: ಮಂಡ್ಯದಲ್ಲಿ ಹೀಗೊಂದು ಹೊಸ ವಿಧಾನ - ಮಂಡ್ಯ ಸುದ್ದಿ

ಅಗಲಿದ ಪಿತೃಗಳಿಗೆ ಕಾವೇರಿ ದಂಡೆಯಲ್ಲಿ ತರ್ಪಣ ನೀಡಿ ಪಿಂಡಪ್ರದಾನ ಮಾಡಲಾಗುತ್ತಿತ್ತು. ಕೊರೊನಾ ಇದಕ್ಕೆಲ್ಲ ಬ್ರೇಕ್ ಹಾಕಿದ ಕಾರಣ ಇದೀಗ ಆನ್​ಲೈನ್ ಪಿತೃತರ್ಪಣಕ್ಕೆ ಹೊಸ ಪ್ಲಾನ್​ ಹಾಕಿಕೊಂಡಿದ್ದಾರೆ.

Pitru Paksha puja
ಪಿತೃತರ್ಪಣ

By

Published : Sep 17, 2020, 12:23 PM IST

ಮಂಡ್ಯ:ಪಿತೃ ಪಕ್ಷದ ಕೊರೊನಾ ಭಯವನ್ನು ಶ್ರೀರಂಗಪಟ್ಟಣದ ಶಾಶ್ವತಿ ಕ್ರಿಯಾ ಸಮಿತಿ ದೂರ ಮಾಡಿದೆ. ಪಿತೃಗಳಿಗೆ ತರ್ಪಣ ಕೊಡುವ ಹೊಸ ಆಲೋಚನೆಯೊಂದಿಗೆ ಆನ್‌ಲೈನ್ ಪೂಜೆ ಆರಂಭಿಸಿದೆ.

ಮಂಡ್ಯದಲ್ಲಿ ಆನ್‌ಲೈನ್ ಮೂಲಕ ಪಿತೃತರ್ಪಣ

ಅಗಲಿದ ಪಿತೃಗಳಿಗೆಕಾವೇರಿ ದಂಡೆಯಲ್ಲಿ ತರ್ಪಣ ನೀಡಿ ಪಿಂಡಪ್ರದಾನ ಮಾಡಲಾಗುತ್ತಿತ್ತು. ಆದರೆ ಕೊರೊನಾ ಇದಕ್ಕೆಲ್ಲ ಬ್ರೇಕ್ ಹಾಕಿದೆ. ಹೀಗಾಗಿ ಪ್ರಸಿದ್ಧ ಆಧ್ಯಾತ್ಮಿಕ ಚಿಂತಕ ಹಾಗೂ ಪುರೋಹಿತರಾದ ಡಾ. ಭಾನುಪ್ರಕಾಶ್ ಶರ್ಮಾ ತಮ್ಮ 30 ಜನ ಶಿಷ್ಯರ ಜೊತೆಗೂಡಿ ಆನ್​ಲೈನ್​ ಮೂಲಕ ಶ್ರಾದ್ಧ ಕಾರ್ಯ ಮಾಡಿಸುತ್ತಿದ್ದಾರೆ.

ಪೂಜಾ ವಿಧಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊರೊನಾ ಕಾರಣದಿಂದ ಬರಲಾಗದವರು ಆನ್​ಲೈನ್ ಮೂಲಕವೇ ಪೂಜೆ ಮಾಡಿಸಿ ಅಗಲಿದ ತಮ್ಮ ಪಿತೃಗಳಿಗೆ ಸದ್ಗತಿ ಕೋರಿದ್ದಾರೆ. ಆನ್‌ಲೈನ್‌ ಮೂಲಕ ಪೂಜೆ ಮಾಡಿಸುವವರ ಮಾಹಿತಿ ಪಡೆದು ಪಿಂಡಪ್ರದಾನ , ತಿಲತರ್ಪಣ, ನಾರಾಯಣ ಬಲಿಯಂತಹ ಪೂಜೆ ನೆರವೇರಿಸಲಾಗುತ್ತಿದೆ. ಮನೆಯಲ್ಲಿಯೇ ಕುಳಿತು ಈ ಪೂಜೆಯಲ್ಲಿ ಭಾಗಿಯಾಗಿಬಹುದಾಗಿದೆ.

ABOUT THE AUTHOR

...view details