ಮಂಡ್ಯ:ಆದಿಚುಂಚನಗಿರಿ ಮಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಅವರ ಫೋನ್ ಕದ್ದಾಲಿಕೆ ವಿಚಾರ ಕುರಿತು ಜೆಡಿಎಸ್ ಮುಖಂಡರನ್ನು ಕಟ್ಟಿಹಾಕಲು ಬಿಜೆಪಿ ಚಕ್ರವ್ಯೂಹ ರೂಪಿಸಿರಬಹುದು ಎಂಬ ಅನುಮಾನ ಮೂಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕ ಸುರೇಶ್ ಗೌಡ ಅಸಮಾಧಾನ ಹೊರ ಹಾಕಿದ್ದಾರೆ.
ಫೋನ್ ಕದ್ದಾಲಿಕೆ ಪ್ರಕರಣ ಬಿಜೆಪಿ ರೂಪಿಸಿರುವ ಚಕ್ರವ್ಯೂಹ: ಶಾಸಕ ಸುರೇಶ್ ಗೌಡ - Nirmalandanath swamihji Phone tapping
ಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಶಾಸಕ ಸುರೇಶ್ ಗೌಡ ಅಸಮಾಧಾನ ಹೊರ ಹಾಕಿದ್ದಾರೆ.
![ಫೋನ್ ಕದ್ದಾಲಿಕೆ ಪ್ರಕರಣ ಬಿಜೆಪಿ ರೂಪಿಸಿರುವ ಚಕ್ರವ್ಯೂಹ: ಶಾಸಕ ಸುರೇಶ್ ಗೌಡ](https://etvbharatimages.akamaized.net/etvbharat/prod-images/768-512-4618485-thumbnail-3x2-tt.jpg)
ಶ್ರೀಗಳ ಫೋನ್ ಕದ್ದಾಲಿಕೆಯನ್ನು ಯಾರೇ ಮಾಡಿದ್ದರು ಅದು ಖಂಡನೀಯ. ಸಿಬಿಐ ತನಿಖೆ ಮಾಡುತ್ತಿರುವುದರ ಎಲ್ಲ ವಿಷಯಗಳ ಕುರಿತು ಪ್ರತಿನಿತ್ಯದ ಮಾಹಿತಿಯನ್ನು ಆಡಳಿತ ಪಕ್ಷದ ನಾಯಕರು ಬಹಿರಂಗವಾಗಿ ತಿಳಿಸುತ್ತಿದ್ದಾರೆ. ತನಿಖೆ ಮುಗಿಯುವರೆಗೂ ಗೌಪ್ಯವಾಗಿಡಬೇಕು. ಆದರೆ ತನಿಖೆ ಕುರಿತು ಆಡಳಿತ ಪಕ್ಷಕ್ಕೆ ಸಂಪೂರ್ಣ ಮಾಹಿತಿ ನೀಡುತ್ತಿದ್ದಾರೆ. ಇದು ತನಿಖೆಯಾಗಲು ಹೇಗೆ ಸಾಧ್ಯ. ಈ ತನಿಖೆ ನಂಬಲು ಅರ್ಹವಾಗಿಲ್ಲ ಎಂದರು.
ಆಡಳಿತ ಪಕ್ಷ ರಾಜಕೀಯ ಲಾಭ ಪಡೆಯುತ್ತಿರುವುದು ಜನಸಾಮಾನ್ಯರಿಗೆ ಗೊತ್ತಿದೆ. ವಿರೋಧ ಪಕ್ಷದವರನ್ನು ಹೆದರಿಸಿ ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಮಾಡಿರುವಂತಹ ವ್ಯೂಹ ಇದು. ಸೋಮವಾರ ಅಧಿಕಾರಿಯೊಬ್ಬರು ವಿಚಾರಣೆ ಮಾಡಿರುವ ಎಲ್ಲಾ ಅಂಶಗಳನ್ನು ಇವರು ಹೇಳುತ್ತಾರೆ. ಪ್ರಾದೇಶಿಕ ಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.