ಮಂಡ್ಯ:ಕೇಂದ್ರ ಸರ್ಕಾರವು ಪಿಎಫ್‌ಐ ಸಂಘಟನೆ ನಿಷೇಧ ಮಾಡಿ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಕಚೇರಿಗಳಿಗೆ ಬೀಗಮುದ್ರೆ ಹಾಕಲಾಗುತ್ತಿದೆ. ನಗರದ ಗುತ್ತಲು ಬಡಾವಣೆಯಲ್ಲಿರುವ ಪಿಎಫ್‌ಐ ಕಚೇರಿಗೂ ತಹಶೀಲ್ದಾರ್ ಮಹಮದ್ ಕುಂಞ ನೇತೃತ್ವದಲ್ಲಿ ಬೀಗಮುದ್ರೆ ಹಾಕಲಾಗಿದೆ.
ಮಂಡ್ಯದ ಪಿಎಫ್‌ಐ ಕಚೇರಿಗೆ ಬೀಗಮುದ್ರೆ - pfi office sealed by police in mandya
ಮಂಡ್ಯದಲ್ಲಿ ತಹಶೀಲ್ದಾರ್ ನೇತೃತ್ವದಲ್ಲಿ ಪಿಎಫ್‌ಐ ಕಚೇರಿ ಪರಿಶೀಲಿಸಿ ಬೀಗ ಹಾಕಲಾಗಿದೆ.
ಮಂಡ್ಯದಲ್ಲಿ ಪಿಎಫ್‌ಐ ಕಚೇರಿಗೆ ಬೀಗ
ಗುರುವಾರ ಬೆಳಗ್ಗೆ ಪಿಎಫ್‌ಐ ಕಚೇರಿಗೆ ತೆರಳಿದ ತಹಶೀಲ್ದಾರ್ ಮಹಮದ್ ಕುಂಇ, ಪೂರ್ವ ಠಾಣೆಯ ಎಸ್ಐ ರಮೇಶ್ ಕರಕಿಕಟ್ಟೆ, ಕಂದಾಯ ಅಧಿಕಾರಿಗಳಾದ ರವಿಚಂದ್ರ, ರೂಪಾ, ತೇಜ್ ರಾಜ್ ಅವರ ತಂಡ ಅಲ್ಲಿದ್ದ ವಸ್ತುಗಳ ಪಟ್ಟಿ ಮಾಡಿದ್ದಾರೆ. ಬಳಿಕ ತಹಶೀಲ್ದಾರ್ ಸಮ್ಮುಖದಲ್ಲಿ ಕಚೇರಿಗೆ ಬೀಗ ಜಡಿದು ಸೀಲ್ ಮಾಡಲಾಗಿದೆ.
ಇದನ್ನೂ ಓದಿ:ಬೆಂಗಳೂರು, ಬೆಳಗಾವಿಯಲ್ಲಿ ಪಿಎಫ್‌ಐ ಕಚೇರಿಗಳು ಬಂದ್: ಸೀಲ್, ಬೀಗಮುದ್ರೆ ಒತ್ತಿದ ಪೊಲೀಸರು