ಮಂಡ್ಯ: ಕೀಟನಾಶಕ ಮಿಶ್ರಿತ ನೀರು ಸೇವಿಸಿ ಮಕ್ಕಳು ಸೇರಿ 15 ಮಂದಿ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ. ನೀರು ಸೇವಿಸಿ ವಾಂತಿ ಭೇದಿ ಶುರುವಾಗಿದ್ದು, 15 ಜನರನ್ನೂ ನಗರದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸ್ವಸ್ಥಗೊಂಡವರೆಲ್ಲ ಬಳ್ಳಾರಿ ಮೂಲದವರು ಎಂದು ತಿಳಿದುಬಂದಿದೆ.
ಕೀಟನಾಶಕ ಮಿಶ್ರಿತ ನೀರು ಸೇವನೆ.. ಮಕ್ಕಳು ಸೇರಿ 15 ಮಂದಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲು - ಈಟಿವಿ ಭಾರತ ಕನ್ನಡ
ಮಂಡ್ಯದ ಹೊಸಕೊಪ್ಪಲು ಗ್ರಾಮದಲ್ಲಿ ಕೀಟನಾಶಕ ಮಿಶ್ರಿತ ನೀರು ಕುಡಿದ ಮಕ್ಕಳು ಸೇರಿ 15 ಮಂದಿಗೆ ವಾಂತಿ ಭೇದಿ ಶುರುವಾಗಿದ್ದು, ನಗರದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೀಟನಾಶಕ ಮಿಶ್ರಿತ ನೀರು ಸೇವನೆ : ಮಕ್ಕಳು ಸೇರಿ 15 ಮಂದಿ ಆಸ್ಪತ್ರೆ ದಾಖಲು
ಸೋಮವಾರ ಹೊಸಕೊಪ್ಪಲು ಗ್ರಾಮಕ್ಕೆ ಕಬ್ಬು ಕಟಾವಿಗೆಂದು ಬಳ್ಳಾರಿಯಿಂದ 30 ಜನರು ಬಂದಿದ್ದರು. ಮಧ್ಯಾಹ್ನ ಊಟದ ನಂತರ, ಕಬ್ಬು ಕಟಾವು ಮಾಡುತ್ತಿದ್ದ ಸಮೀಪದ ಜಮೀನಿನಲ್ಲಿ ಕೀಟನಾಶಕ ಸಿಂಪಡಿಸಿದ ಡ್ರಮ್ನಲ್ಲಿದ್ದ ನೀರು ಕುಡಿದಿದ್ದಾರೆ. ಇದರಿಂದ ಮಕ್ಕಳು ಸೇರಿ 15 ಮಂದಿಗೆ ವಾಂತಿ ಭೇದಿ ಶುರುವಾಗಿದ್ದು, ತಕ್ಷಣ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ :ಸಿಬ್ಬಂದಿ ವೇಷದಲ್ಲಿ ಕೊಡಗು ಜಿಲ್ಲಾಸ್ಪತ್ರೆಗೆ ನುಗ್ಗಿದ ಖದೀಮ.. ಬ್ಯಾಗ್, ಬೈಕ್ ಎಗರಿಸಿ ಪರಾರಿ