ಮಂಡ್ಯ: ಕೊರೊನಾಗೆ ವ್ಯಕ್ತಿ ಬಲಿಯಾಗಿರುವ ಬಲಿಯಾಗಿರುವ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.
ಕೊರೊನಾಗೆ ವ್ಯಕ್ತಿ ಬಲಿ: ಮಂಡ್ಯದ ಹೆಚ್.ಮಲ್ಲಿಗೆರೆಯಲ್ಲಿ ಆತಂಕ - ಮಂಡ್ಯದ ಹೆಚ್.ಮಲ್ಲಿಗೆರೆ
ಮಂಡ್ಯದಲ್ಲಿ ವ್ಯಕ್ತಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದ ವ್ಯಕ್ತಿ ಮೃತಪಟ್ಟಿದ್ದು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
![ಕೊರೊನಾಗೆ ವ್ಯಕ್ತಿ ಬಲಿ: ಮಂಡ್ಯದ ಹೆಚ್.ಮಲ್ಲಿಗೆರೆಯಲ್ಲಿ ಆತಂಕ Person death from corona](https://etvbharatimages.akamaized.net/etvbharat/prod-images/768-512-11157262-thumbnail-3x2-vish.jpg)
ಮಂಡ್ಯದ ಹೆಚ್.ಮಲ್ಲಿಗೆರೆ
ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದ ವ್ಯಕ್ತಿ ಖಾಸಗಿ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರು. ಈತನಿಗೆ ಕಳೆದ 2 ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸೋಂಕಿತ ಮೃತಪಟ್ಟಿದ್ದಾರೆ.
ಮೃತನ ಸಂಪರ್ಕದಲ್ಲಿದ್ದ ಪತ್ನಿ, ತಂದೆ, ತಾಯಿಗೂ ಕೊರೊನಾ ವಕ್ಕರಿಸಿದೆ. ಮಲ್ಲಿಗೆರೆಯಲ್ಲಿ ಸೋಂಕಿತನ ಸಾವಿನಿಂದ ಜನರು ಆತಂಕಗೊಂಡಿದ್ದಾರೆ.