ಮಂಡ್ಯ: 6.50 ಕೋಟಿ ವೆಚ್ಚದಲ್ಲಿ ಜಿಲ್ಲೆಯ ಗುನ್ನಾಯಕನಹಳ್ಳಿ ಹಾಗೂ ಶಿವಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಿಸಲಾಗಿದೆ. ಆದರೆ, ಕಳಪೆ ಗುಣಮಟ್ಟದ ಕಾಮಗಾರಿಯಿಂದ ಚಕ್ಕೆ ಹಾಗೂ ಹಪ್ಪಳದಂತೆ ರಸ್ತೆಯ ಡಾಂಬರು ಕಿತ್ತು ಬರುತ್ತಿದೆಯಂತೆ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಳಪೆ ರಸ್ತೆ ನಿರ್ಮಾಣದ ಬಗ್ಗೆ ಗುನ್ನಾಯಕಹಳ್ಳಿ ಗ್ರಾಮಸ್ಥರಿಂದ ಆಕ್ರೋಶ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಸಂಸದೆ ಸುಮಲತಾ ಅವರ ಎಂ.ಪಿ ಅನುದಾನದಲ್ಲಿ ಸುಮಾರು 8 ಕಿ.ಮೀ ಉದ್ದದ ಡಾಂಬರು ರಸ್ತೆ ನಿರ್ಮಿಸಲಾಗಿದೆ. ಗುತ್ತಿಗೆದಾರ ರಾಘವೇಂದ್ರ ಎಂಬುವವರು ರಸ್ತೆ ನಿರ್ಮಾಣ ಮಾಡಿದ್ದಾರೆ. ನಿಯಮಾನುಸಾರ ಕಾಮಗಾರಿ ನಡೆಸದೆ ಕೇವಲ ಒಂದು ಒಂದೂವರೆ ಇಂಚಷ್ಟು ಡಾಂಬರು ಹಾಕಿ ಕಳಪೆ ಕಾಮಗಾರಿ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಗುಣಮಟ್ಟವಿಲ್ಲದ ರಸ್ತೆ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ರಸ್ತೆಯ ಡಾಂಬರು ಕಿತ್ತು ಹಾಕಿ ಆಕ್ರೋಶ ಹೊರ ವ್ಯಕ್ತಪಡಿಸಿದ್ದಾರೆ. 10 ವರ್ಷದ ಬಳಿಕ ನಮ್ಮ ಹಳ್ಳಿಯ ರಸ್ತೆ ಡಾಂಬರು ಕಂಡಿದೆ. ಆದರೆ, ಕಳಪೆ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಒಂದು ವರ್ಷವೂ ಬಾಳಿಕೆ ಬರುವುದಿಲ್ಲ. ಕೂಡಲೇ ಗುಣಮಟ್ಟದ ರಸ್ತೆ ನಿರ್ಮಿಸಿಕೊಡಿ ಅಂತಿದ್ದಾರೆ.
6.50ಕೋಟಿಗೆ ಟೆಂಡರ್ ಪಡೆದ ಗುತ್ತಿಗೆದಾರ ರಾಘವೇಂದ್ರ ಹಣ ಮಾಡುವ ದುರುದ್ದೇಶದಿಂದ ಕಳಪೆ ಗುಣಮಟ್ಟದ ರಸ್ತೆ ನಿರ್ಮಿಸಿದ್ದರೂ ಅಧಿಕಾರಿಗಳು ಮಾತ್ರ ಈ ಬಗ್ಗೆ ನಮಗೆ ಗೊತ್ತೇ ಇಲ್ಲ. ಗುಣಮಟ್ಟದ ಪರೀಕ್ಷೆ ನಡೆಸಿದ ಬಳಿಕ ಕಳಪೆ ಕಾಮಗಾರಿ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸಬೂಬು ಹೇಳ್ತಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ