ಮಂಡ್ಯ :ನಾನು ಗೆಲ್ಲುತ್ತೇನೆಂದು ಲಕ್ಷಾಂತರ, ಕೋಟ್ಯಂತರ ರೂಪಾಯಿಯನ್ನ ನನ್ನ ಪರ ಬೆಟ್ಟಿಂಗ್ ಕಟ್ಟಿದ್ರಿ. ಎಷ್ಟೋ ಜನ ನನ್ನ ಸೋಲಿನಿಂದ ಮನೆ-ಮಠ ಕಳೆದುಕೊಂಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಗ್ರಾಪಂ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ಸ್ಪರ್ಧೆ ಮಾಡಿ ಸೋಲುಂಡಿದ್ದನ್ನು ನೆನೆದು ಭಾವುಕರಾದರು.
ಮಂಡ್ಯದ ಎಲ್ಲಾ ಶಾಸಕರು ನಾನು ಚುನಾವಣೆಗೆ ನಿಲ್ಲಬೇಕು ಎಂದು ಹೇಳಿದ್ರು. ಅವರ ಅಭಿಪ್ರಾಯದ ಪ್ರಕಾರ ನಾನು ಚುನಾವಣೆಗೆ ನಿಂತೆ. ಆದರೆ, ಚುನಾವಣೆಯಲ್ಲಿ ಸೋತಿರೋದು ನಂಗೆ ಚಿಂತೆ ಇಲ್ಲ ಎಂದರು.
ನಾನು ಸೋತಿರುವುದು ನನಗೆ ಬೇಸರವಿಲ್ಲ. ನೀವು ನಾನು ಗೆಲ್ಲುತ್ತೇನೆ ಅಂದುಕೊಂಡಿದ್ರಿ. ನಾನು ಗೆಲ್ಲುತ್ತೇನೆಂದು ಲಕ್ಷಾಂತರ, ಕೋಟ್ಯಂತರ ರೂಪಾಯಿಯನ್ನ ನನ್ನ ಪರ ಬೆಟ್ಟಿಂಗ್ ಕಟ್ಟಿದ್ರಿ. ಎಷ್ಟೋ ಜನ ನನ್ನ ಸೋಲಿನಿಂದ ಮನೆ-ಮಠ ಕಳೆದುಕೊಂಡಿದ್ದಾರೆ ಎಂದು ಬೇಸರಿಸಿದರು.
ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಬೇಸರ ಇದು ನನಗೆ ತುಂಬಾ ನೋವಾಗುತ್ತಿದೆ. ನನ್ನ ವಿರೋಧವಾಗಿ ನಿಂತಿದ್ದವರಿಗೆ ಜಿಲ್ಲೆಯಲ್ಲಿ ಅಷ್ಟು ಜನ ಸಂಪರ್ಕ ಇರಲಿಲ್ಲ. ಕುಮಾರಣ್ಣನವರ ಶಕ್ತಿ ಕುಗ್ಗಿಸಲು ವಿರೋಧಿ ಬಣ ಸೃಷ್ಟಿಯಾದವು ಎಂದರು.
ಓದಿ:ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧ; ಯಡಿಯೂರಪ್ಪ
ನಾನು ಸೋತರು ನನಗೆ ಬೇಸರ ಆಗಿಲ್ಲ. ನನಗೂ ಚುನಾವಣೆಗೂ ಮೊದಲ ಮಂಡ್ಯ ಕ್ಷೇತ್ರದ ಬಗ್ಗೆ ಅಷ್ಟೊಂದು ಒಡನಾಟ ಇರಲಿಲ್ಲ. ಆದರೂ ಹೀಗೆ ಇದ್ದರು ಜನ ಇಷ್ಟು ಪ್ರೀತಿ ಕೊಟ್ಟಿದ್ದಾರೆ. ನಾನು ಗೆದ್ದು ದೆಹಲಿಗೆ ಹೋಗಿ ಮೆರೆಯ ಬೇಕಿರಲಿಲ್ಲ. ಆ ವಿಚಾರ ಈಗ ಮಾತನಾಡುವುದು ಬೇಡ ಎನ್ನುತ್ತಲೇ ಸೋಲಿನ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು.