ಮಂಡ್ಯ:ಪೇಜಾವರ ಶ್ರೀಗಳು ಕೆಆರ್‌ಎಸ್‌ಗೆ ಭೇಟಿ ನೀಡಿ ಅಣೆಕಟ್ಟೆ ವೀಕ್ಷಣೆ ಮಾಡಿದರು. ವ್ಹೀಲ್ ಚೇರ್ನಲ್ಲಿ ಡ್ಯಾಂ ಮೇಲೆ ಬಂದ ಶ್ರೀಗಳು, ಅಣೆಕಟ್ಟೆಯಿಂದ ಕಾವೇರಿ ನದಿಗೆ ನೀರು ಹೋಗುತ್ತಿರುವ ದೃಶ್ಯ ವೀಕ್ಷಣೆ ಮಾಡಿದರು.
ಕೆಆರ್‌ಎಸ್ ಅಣೆಕಟ್ಟೆ ವೀಕ್ಷಣೆ ಮಾಡಿದ ಪೇಜಾವರ ಶ್ರೀಗಳು - ಕೆಆರ್‌ಎಸ್ ಅಣೆಕಟ್ಟೆ ವೀಕ್ಷಣೆ
ಪೇಜಾವರ ಶ್ರೀಗಳು ಕೆಆರ್‌ಎಸ್‌ಗೆ ಭೇಟಿ ನೀಡಿ ಅಣೆಕಟ್ಟೆ ವೀಕ್ಷಣೆ ಮಾಡಿದರು.
ಕೆಆರ್‌ಎಸ್ ಅಣೆಕಟ್ಟೆ
ಅಧಿಕಾರಿಗಳಿಂದ ಅಣೆಕಟ್ಟೆಯ ಒಳ, ಹೊರಹರಿವಿನ ಬಗ್ಗೆ ಮಾಹಿತಿ ಪಡೆದ ಶ್ರೀಗಳು, ಬಳಿಕ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಅನೇಕ ಹಳ್ಳಿಗಳಿಗೆ ತೊಂದರೆಯಾಗುತ್ತಿದೆ, ಇದು ಬೇಸರ ತರಿಸಿದೆ. ಅತಿವೃಷ್ಟಿಯಾದ್ರೂ ಕಷ್ಟ, ಅನಾವೃಷ್ಟಿಯಾದ್ರೂ ಕಷ್ಟ ಎಂದರು.
ಇದೀಗ ರಾಜ್ಯದಲ್ಲಿ ಎರಡೂ ಆಗಿದೆ. ಇದರಿಂದ ಕರ್ನಾಟಕಕ್ಕೆ ತೊಂದರೆಯಾಗಿದೆ. ಪರಿಸ್ಥಿತಿ ನಿಭಾಯಿಸಲು ಸರ್ಕಾರ ಮಾಡೋ ಪ್ರಯತ್ನ ಮಾಡುತ್ತಿದೆ. ನಾವೂ ಸಹಕಾರ ನೀಡಬೇಕು. ನೆರೆ ಸಂತ್ರಸ್ತರಿಗೆ ಮಠದಿಂದ ಸಹಾಯ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.