ಕರ್ನಾಟಕ

karnataka

ETV Bharat / state

ಇಒ ವಿರುದ್ಧ ಜಿಪಂ ಸಿಇಒಗೆ ದೂರು ನೀಡಿದ ಪಿಡಿಒಗಳು - ಮಂಡ್ಯ ಲೇಟೆಸ್ಟ್​ ನ್ಯೂಸ್

ಮಂಡ್ಯ ಇಒ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಪಿಡಿಒಗಳು ದೂರು ನೀಡಿದ್ದಾರೆ.

ಇಒ ವಿರುದ್ಧ ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗೆ ದೂರು ನೀಡಿದ ಪಿಡಿಒಗಳು
PDOs gave complaint against EO to CEO at Mandya

By

Published : Feb 3, 2021, 5:13 PM IST

ಮಂಡ್ಯ:ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿರುದ್ಧ ಇಲ್ಲಿನ ಪಿಡಿಒಗಳು ದೂರು ನೀಡಿದ್ದಾರೆ.

ಇಒ ವಿರುದ್ಧ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ ಪಿಡಿಒಗಳು

ಮಂಡ್ಯ ಇಒ ವಿರುದ್ಧ ದೂರು ನೀಡಲು ಪಿಡಿಒಗಳು ಸಿಇಒ ಮನೆ ಬಳಿ ಹೋಗಿದ್ದು, ಈ ವೇಳೆ ಸಿಇಒ ಜುಲ್ಫಿಕರ್​ ಉಲ್ಲಾ, ಕೆಲಸದ ಸಮಯದಲ್ಲಿ ಇಲ್ಲಿ ಏಕೆ ಬಂದಿದ್ದೀರಿ ಎಂದು ಪಿಡಿಒಗಳ ನಡೆಯನ್ನು ಪ್ರಶ್ನೆ ಮಾಡಿದ್ದಾರೆ.

ಬಳಿಕ ನೋವು ತೋಡಿಕೊಂಡ ಪಿಡಿಒಗಳು, ಇಒ ಗಂಗಣ್ಣ ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕೆಲಸ ಮಾಡಲು ಸಹ ಬಿಡುತ್ತಿಲ್ಲ ಎಂದು ಆರೋಪಿಸಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಳಗಾದ ಮಂಡ್ಯ ಪಿಡಿಒಗಳು ದೂರು‌ ನೀಡಿದರು. ಬಳಿಕವೇ ಜುಲ್ಫಿಕರ್​ ಉಲ್ಲಾ ಮನವಿ ಸ್ವೀಕರಿಸಿದ್ದಾರೆ.

ABOUT THE AUTHOR

...view details