ಮಂಡ್ಯ:ಸಾರಿಗೆ ಬಸ್ ಅಡ್ಡಗಟ್ಟಿದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಇಂಡಗೋಳು ಗ್ರಾಮದ ರವಿ ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ. ಸೋಮನಹಳ್ಳಿ ಗ್ರಾಮದ ಮೂಲಕ ಸಂಚಾರ ಮಾಡುತ್ತಿದ್ದ ರಾಜಹಂಸ ಬಸ್ ಅಡ್ಡಗಟ್ಟಿರುವ ವ್ಯಕ್ತಿ, ಮುಷ್ಕರ ಇದ್ದರೂ ಬಸ್ ಏಕೆ ಚಾಲನೆ ಮಾಡುತ್ತಿದ್ದೀಯಾ? ಎಂದು ಅವಾಚ್ಯ ಶಬ್ದಗಳಿಂದ ಚಾಲಕನಿಗೆ ನಿಂದಿಸಿದ್ದಾನೆ.