ಮಂಡ್ಯ:ನಗರದ ಅತ್ತ್ಯುತ್ತಮ ಉದ್ಯಾನವನಗಳಲ್ಲಿ ಕಾವೇರಿ ಪಾರ್ಕ್ ಕೂಡಾ ಒಂದು. ಸಂಜೆ ವೇಳೆ ವಾಕ್ ಮಾಡುವವರ ಮೆಚ್ಚಿನ ತಾಣ. ಆದರೆ ಜೆಡಿಎಸ್ ಸಮಾವೇಶದ ನಂತರ ಇದು ಉದ್ಯಾನವನವೋ ಎಂಬ ಪ್ರಶ್ನೆ ಉದ್ಭವಿಸಿದೆ.
ಜೆಡಿಯಸ್ ಸಮಾವೇಶದ ಬಳಿಕ ಅಂದ ಕಳೆದುಕೊಂಡ ಮಂಡ್ಯದ ಪಾರ್ಕ್ - kannada news, Park, lost, beauty, JDS Conference, ಜೆಡಿಯಸ್ ಸಮಾವೇಶ, ಅಂದ ಕಳೆದುಕೊಂಡ, ಮಂಡ್ಯ ಪಾರ್ಕ್
ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಬಳಿಯಿರುವ ಉದ್ಯಾನವನ ಜೆಡಿಎಸ್ ಸಮಾವೇಶದ ನಂತರ ಇದು ಉದ್ಯಾನವನವೋ ಅಲ್ವೋ ಎಂಬಂತೆ ಕಾಣುತ್ತಿದೆ. ಸಿಎಂ ಭಾಷಣ ಕೇಳಲು ಬಂದ ಅಭಿಮಾನಿಗಳು ಪಾರ್ಕ್‌ನಲ್ಲಿದ್ದ ಕಲ್ಲಿನ ಬೆಂಚ್‌ಗಳನ್ನು ಮುರಿದು ಹಾಕಿದ್ದಾರೆ.
![ಜೆಡಿಯಸ್ ಸಮಾವೇಶದ ಬಳಿಕ ಅಂದ ಕಳೆದುಕೊಂಡ ಮಂಡ್ಯದ ಪಾರ್ಕ್](https://etvbharatimages.akamaized.net/etvbharat/images/768-512-2797721-120-dc4805f3-18f2-45e3-b1f4-c1fa698f6bc3.jpg)
ಜಿಲ್ಲಾಧಿಕಾರಿ ಕಚೇರಿ ಬಳಿಯೇ ಈ ಪಾರ್ಕ್ ಇದೆ. ಜೆಡಿಎಸ್ ಸಮಾವೇಶಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅನುಮತಿ ನೀಡಿದ್ದರು. ಅನುಮತಿ ಹಿನ್ನೆಲೆ ಪಾರ್ಕ್ ಎದುರೇ ಸಮಾವೇಶ ಆಯೋಜನೆಗೊಂಡಿತ್ತು. ಸಿಎಂ ಭಾಷಣ ಕೇಳಲು ಬಂದ ಅಭಿಮಾನಿಗಳು ಪಾರ್ಕ್‌ನಲ್ಲಿದ್ದ ಕಲ್ಲಿನ ಬೆಂಚ್‌ಗಳನ್ನು ಮುರಿದು ಹಾಕಿದ್ದಾರೆ. ಹೂವಿನ ಗಿಡಗಳನ್ನು ತುಳಿದು ಹಾಕಿದ್ದು, ಕಸ ರಾಶಿ ರಾಶಿಯಾಗಿ ಬಿದ್ದಿದೆ.
ಸದ್ಯ ವಾಯು ವಿಹಾರಿಗಳು ಜಿಲ್ಲಾಡಳಿತ ಹಾಗೂ ತೋಟಗಾಕಾ ಇಲಾಖೆ ನಿರ್ಧಾರಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಉದ್ಯಾನವನ ಬಿಟ್ಟು ಬೇರೆಡೆ ಅವಕಾಶ ನೀಡಬಹುದಿತ್ತು ಎಂಬ ಸಲಹೆಯೂ ಕೇಳಿ ಬಂದಿದೆ. ಮುಂದೆ ಇಂತಹ ನಿರ್ಧಾರ ತೆಗೆದುಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.
TAGGED:
etv bharat