ಕರ್ನಾಟಕ

karnataka

ETV Bharat / state

ಮಂಡ್ಯ: ಮಗುವನ್ನು ಚರ್ಚ್​ನಲ್ಲಿ ಮಲಗಿಸಿ ಪೋಷಕರು ನಾಪತ್ತೆ - Parents have left the baby at church

ಮಂಡ್ಯದ ಫ್ಯಾಕ್ಟರಿ ಸರ್ಕಲ್‍ನಲ್ಲಿ ಇರುವ ಚರ್ಚ್‍ನಲ್ಲಿ ಪೋಷಕರು ಮಗುವನ್ನು ಬಿಟ್ಟು ಹೋಗಿದ್ದಾರೆ.

Parents have left the baby at church
ಮಗುವನ್ನು ಚರ್ಚ್​ನಲ್ಲಿ ಮಲಗಿಸಿ ಪೋಷಕರು ನಾಪತ್ತೆ

By

Published : May 27, 2022, 10:10 AM IST

ಮಂಡ್ಯ:ಒಂದುವರ್ಷದ ಮಗುವನ್ನು ಚರ್ಚ್​ನಲ್ಲಿ ಮಲಗಿಸಿ ಪೋಷಕರು ನಾಪತ್ತೆಯಾಗಿರುವ ಘಟನೆ ನಿನ್ನೆ (ಗುರುವಾರ) ಬೆಳಗ್ಗೆ ನಡೆದಿದೆ. ಮಂಡ್ಯದ ಫ್ಯಾಕ್ಟರಿ ಸರ್ಕಲ್ ಬಳಿ ಇರುವ ಸೆಂಟ್ ಜಾನ್ಸ್ ಶಾಲೆಯ ಆವರಣದಲ್ಲಿರುವ ಚರ್ಚ್​ನಲ್ಲಿ ಘಟನೆ ಬೆಳಕಿಗೆ ಬಂದಿದೆ.

ಇಬ್ಬರು ವ್ಯಕ್ತಿಗಳು ಚರ್ಚ್​ನ ಆವರಣದಲ್ಲಿ ಒಂದು ವರ್ಷದ ಗಂಡು ಮಗುವನ್ನು ಬಿಟ್ಟು ಹೋಗಿದ್ದಾರೆ. ಇದನ್ನು ಗಮನಿಸಿದ ಫಾದರ್ ಮಗುವನ್ನು ಪಡೆದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅನಾರೋಗ್ಯದಿಂದ ಬಳಲುತ್ತಿರುವ ಮಗುವನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಮಂಡ್ಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ABOUT THE AUTHOR

...view details