ಮಂಡ್ಯ: ನಮ್ಮ ನಿಜವಾದ ಹೀರೋ ದೇವೇಗೌಡರು. ರೈತರ ನಿಜವಾದ ಹೀರೋ ಅವರೇ. ಬಣ್ಣ ಹಚ್ಚಿ ಹೀರೋ ಆದವರಲ್ಲ ಅಂತ ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಡಾ. ಕೆ.ಅನ್ನದಾನಿ ಮಾಜಿ ಪ್ರಧಾನಿಗಳ ಗುಣಗಾನ ಮಾಡಿದರು.
ನಮ್ಮ ನಿಜವಾದ ಹೀರೋ ದೇವೇಗೌಡರು: ಶಾಸಕ ಅನ್ನದಾನಿ - undefined
ನಮ್ಮ ನಿಜವಾದ ಹೀರೋ ದೇವೇಗೌಡರು. ರೈತರ ನಿಜವಾದ ಹೀರೋ ಅವರೇ ಎಂದು ಶಾಸಕ ಅನ್ನದಾನಿ ಹೇಳಿದ್ದಾರೆ.
ಶಾಸಕ ಅನ್ನದಾನಿ
ನಿಖಿಲ್ ಕುಮಾರಸ್ವಾಮಿ ಪ್ರಚಾರ ಕಾರ್ಯಕ್ರಮಕ್ಕೂ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಚಾರಕ್ಕೆ ಯಾರೇ ಹೀರೋ ಬಂದರೂ ನಮ್ಮ ರಿಯಲ್ ಹೀರೋ ಇದ್ದಾರೆ ಎಂದರು.
ಕಾರ್ಯಕರ್ತರನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದ್ದೇವೆ. ಮೈತ್ರಿ ಧರ್ಮವನ್ನು ನಾವು ಪಾಲನೆ ಮಾಡುತ್ತೇವೆ. ಕಾಂಗ್ರೆಸ್ ಮುಖಂಡರೂ ಮಾಡುತ್ತಾರೆ ಎಂಬ ನಂಬಿಕೆ ಇದೆ. ಪ್ರಚಾರಕ್ಕೆ ಅವರೂ ಬರುತ್ತಾರೆ ಎಂಬ ವಿಶ್ವಾಸವಿದೆ ಎಂದರು.