ಮಂಡ್ಯ:ಜಿಲ್ಲೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಇನ್ನು ಕಾಂಗ್ರೆಸ್ ಬೆಂಬಲ ಸರಿಯಾಗಿ ಸಿಕ್ಕಿಲ್ಲ. ಮೇಲ್ಮಟ್ಟದಲ್ಲಿ ಮೈತ್ರಿಯಾದರೂ ಕಾರ್ಯಕರ್ತರ ಮಟ್ಟದಲ್ಲಿ ಮೈತ್ರಿಯ ಕುರುಹು ಇನ್ನು ಪತ್ತೆಯಾಗಿಲ್ಲ.
ಶ್ರೀರಂಗಪಟ್ಟಣದಲ್ಲಿ ಖಾತ್ರಿಯಾಗದ ಮೈತ್ರಿ... ಸುಮಲತಾಗೆ ಜೈ ಎಂದ ಕೈ ಕಾರ್ಯಕರ್ತರು! - news kannada
ಮೈತ್ರಿ ಸರ್ಕಾರದ ವಿರುದ್ಧ ಕೆಂಡ ಕಾರುತ್ತಿರುವ ತಳಮಟ್ಟದ ಕಾರ್ಯಕರ್ತರು ಮತ್ತೆ ಸಿಡಿದೆದ್ದಿದ್ದಾರೆ. ಇಂದು ಜಿಲ್ಲೆಯಲ್ಲಿ ನಡೆದ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಸುಮಲತಾಗೆ ಜೈಕಾರ ಕೂಗಿದ್ದು ಆಶ್ಚರ್ಯ ಉಂಟುಮಾಡಿತು.
ಹೌದು, ಮೈತ್ರಿ ಅಭ್ಯರ್ಥಿಗೆ ಬೆಂಬಲ ಕೊಡುವ ವಿಚಾರವಾಗಿ ಶ್ರೀರಂಗಪಟ್ಟಣ ಬ್ಲಾಕ್ ಕಾಂಗ್ರೆಸ್ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಅಸಮಾಧಾನ ಭುಗಿಲೆದ್ದಿದೆ.
ಜೆಡಿಎಸ್ ಜೊತೆಗಿನ ಮೈತ್ರಿಗೆ ಶ್ರೀರಂಗಪಟ್ಡಣದಲ್ಲಿ ವಿರೋಧ ವ್ಯಕ್ತವಾಯಿತು. ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಮುಂದೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಾಜು ಮತ್ತು ಕಣದಲ್ಲಿರುವ ಅಭ್ಯರ್ಥಿಗೆ ಕೈ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕಾರ್ಯಕರ್ತರ ವಿರೋಧಕ್ಕೆ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು. ಈ ಸಂದರ್ಭದಲ್ಲಿ ಕೆಲ ಕಾರ್ಯಕರ್ತರು ಸುಮಲತಾಗೆ ಜೈಕಾರ ಕೂಗಿ, ಸುಮಲತಾ ಅವರನ್ನು ಬೆಂಬಲಿಸಲು ನಿರ್ಧಾರ ಸಹ ಕೈಗೊಂಡರು.