ಕರ್ನಾಟಕ

karnataka

ETV Bharat / state

ಮಂಡ್ಯ: ಮಸೀದಿ ನಿರ್ಮಾಣಕ್ಕೆ ಹಿಂದೂ ಕಾರ್ಯಕರ್ತರ ವಿರೋಧ - Opposition of Hindu activists to build mosque in Mandya

ಕೊಡಿಯಾಲ ಗ್ರಾಮದಲ್ಲಿ 5 ಸಾವಿರದಷ್ಟು ಜನಸಂಖ್ಯೆ ಇದೆ. ಈ ಪೈಕಿ 300 ಅನ್ಯಧರ್ಮೀಯರು ವಾಸವಾಗಿದ್ದಾರೆ. ಹಿಂದೂಗಳೇ ಹೆಚ್ಚಿರುವ ಕಡೆ ಮಸೀದಿ ನಿರ್ಮಾಣ ಮಾಡಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿ ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯದಲ್ಲಿ ಮಸೀದಿ ಕಟ್ಟಲು ಹಿಂದೂ ಕಾರ್ಯಕರ್ತರ ವಿರೋಧ
ಮಂಡ್ಯದಲ್ಲಿ ಮಸೀದಿ ಕಟ್ಟಲು ಹಿಂದೂ ಕಾರ್ಯಕರ್ತರ ವಿರೋಧ

By

Published : Apr 11, 2022, 9:40 PM IST

ಮಂಡ್ಯ: ಜಿಲ್ಲೆಯಲ್ಲಿ ಧರ್ಮ ಸಂಘರ್ಷ ಮುಂದುವರೆದಿದೆ. ದೀವಟಿಗೆ ಸಲಾಂ, ಮೂರ್ತಿ ವಾರ್ ಬಳಿಕ ಇದೀಗ ಪ್ರಾರ್ಥನಾ ಮುಸ್ಲಿಮರ ಸಮೀದಿ ನಿರ್ಮಾಣಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಶ್ರೀರಂಗಪಟ್ಟಣ ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಗ್ತಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿ, ಪ್ರತಿಭಟನೆ ನಡೆಸಿವೆ.

ಕೊಡಿಯಾಲ ಗ್ರಾಮದಲ್ಲಿ 5 ಸಾವಿರದಷ್ಟು ಜನಸಂಖ್ಯೆ ಇದೆ. ಈ ಪೈಕಿ 300 ಅನ್ಯಧರ್ಮೀಯರು ವಾಸವಾಗಿದ್ದಾರೆ. ಹಿಂದೂಗಳೇ ಹೆಚ್ಚಿರುವ ಕಡೆ ಮಸೀದಿ ನಿರ್ಮಾಣ ಮಾಡಿ ಶಾಂತಿ ಸುವ್ಯವಸ್ಥೆ ಹದಗೆಡಿಸುವ ಕೆಲಸ ಮಾಡಲಾಗುತ್ತಿದೆ. ಕೂಡಲೇ ನಿರ್ಮಾಣ ಕಾರ್ಯ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.


ಇದನ್ನೂ ಓದಿ: ಸಮಾನತೆ ಸಾರಿದ ಬಾಬಾ ಸಾಹೇಬರ ಮೂರ್ತಿಗಿಲ್ಲ ನೆಲೆ: ಸವರ್ಣೀಯರ ವಿರುದ್ಧ ಹೋರಾಟಕ್ಕಿಳಿದ ದಲಿತರು

ಶ್ರೀರಂಗಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಸ್‌ಸ್ಟ್ಯಾಂಡ್ ವೃತ್ತದಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ಮೂಲಕ ತಲುಪಿ ಮನವಿ ಸಲ್ಲಿಸಿದರು. ಒಂದು ವಾರದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮಸೀದಿ ನಿರ್ಮಾಣ ಕಾರ್ಯ ನಿಲ್ಲಿಸಬೇಕು ಇಲ್ಲವಾದರೆ, ಇಡೀ ಜಿಲ್ಲೆ ಸ್ತಬ್ಧಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕೊಡಿಯಾಲ ಮುಸ್ಲಿಂ ಮುಖಂಡ ಸಲೀಂ, ನಾವು ಪ್ರಾರ್ಥನಾ ಮಂದಿರ ನಿರ್ಮಾಣ ಮಾಡ್ತಿಲ್ಲ. ಶೈಕ್ಷಣಿಕ ಕೇಂದ್ರ ಸ್ಥಾಪಿಸಿ ಮಕ್ಕಳಿಗೆ ಶಿಕ್ಷಣ ಕಲಿಸುವ ಕೆಲಸ ಮಾಡ್ತಿದ್ದೇವೆ ಎಂದು ಹೇಳಿದರು.

ABOUT THE AUTHOR

...view details