ಕರ್ನಾಟಕ

karnataka

ETV Bharat / state

ನಾನು ಜೆಡಿಎಸ್ ಬಗ್ಗೆ ಮಾತನಾಡೋದೆ ಇಲ್ಲ : ಹೆಚ್​ಡಿಕೆ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು - ಮಂಡ್ಯ ನ್ಯೂಸ್​

ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡೋದನ್ನ ಬಿಟ್ಟಿದ್ದೇನೆ. ಯಾಕಂದ್ರೆ, ಮಾತನಾಡಿದ್ರೆ ನನ್ನ ಮಾತುಗಳನ್ನ ಕೋಮುವಾದಿ ಬಣ್ಣಕಟ್ಟಿ ತಿರುಚುತ್ತಾರೆ. ನಾನು‌ ಕುಮಾರಸ್ವಾಮಿ ಹೇಳಿಕೆಗಳನ್ನ ನೆಗ್ಲೈಟ್ ಮಾಡಿದ್ದೀನಿ..

opposition leader siddaramaiah reaction in mandya
ಹೆಚ್​ಡಿಕೆ ಹೇಳಿಕೆ ಸಿದ್ದರಾಮಯ್ಯ ತಿರುಗೇಟು

By

Published : Oct 10, 2021, 3:31 PM IST

ಮಂಡ್ಯ :ನಾನು ಜೆಡಿಎಸ್ ಬಗ್ಗೆ ಮಾತನಾಡೋದೆ ಇಲ್ಲ. ಕುಮಾರಸ್ವಾಮಿ ಕಾಲು ಕೆರೆದುಕೊಂಡು ಬರ್ತಾರೆ, ನಾನೇನು ಮಾಡ್ಲಿ ಎಂದು 'ಜೆಡಿಎಸ್ ಬಗ್ಗೆ ಮಾತನಾಡದಿದ್ರೆ ಸಿದ್ದರಾಮಯ್ಯಗೆ ನಿದ್ದೆ ಬರಲ್ಲ' ಎಂಬ ಹೆಚ್​​ ಡಿ ಕುಮಾರಸ್ವಾಮಿ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಹೆಚ್​ಡಿಕೆ ಹೇಳಿಕೆ ಸಿದ್ದರಾಮಯ್ಯ ತಿರುಗೇಟು ನೀಡಿರುವುದು..

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ, ದೇವೇಗೌಡರ ಬಗ್ಗೆ ಮಾತನಾಡೋದನ್ನ ಬಿಟ್ಟಿದ್ದೇನೆ. ಯಾಕಂದ್ರೆ, ಮಾತನಾಡಿದ್ರೆ ನನ್ನ ಮಾತುಗಳನ್ನ ಕೋಮುವಾದಿ ಬಣ್ಣಕಟ್ಟಿ ತಿರುಚುತ್ತಾರೆ. ನಾನು‌ ಕುಮಾರಸ್ವಾಮಿ ಹೇಳಿಕೆಗಳನ್ನ ನೆಗ್ಲೈಟ್ ಮಾಡಿದ್ದೀನಿ ಎಂದು ಟಾಂಗ್ ನೀಡಿದರು.

ನಾನು ಮೊದಲಿನಿಂದಲು ಆರ್​ಎಸ್​​ಎಸ್ ವಿರೋಧಿ :ನಾನು ಮೊದಲಿನಿಂದಲು ಆರ್​ಎಸ್​​ಎಸ್ ವಿರುದ್ಧ ಮಾತನಾಡ್ತೀನಿ. ಆರ್​ಎಸ್​​ಎಸ್ ಒಂದು ಕೋಮುವಾದ ಸಂಘಟನೆ. ಶ್ರೇಣೀಕೃತ ವ್ಯವಸ್ಥೆ ಪರವಾಗಿರುವ ಸಂಘಟನೆ. ಮನು ಸಂಸ್ಕೃತಿ ಇರುವ ಸಂಘಟನೆ. ಹೀಗಾಗಿ, ನಾನು ರಾಜಕೀಯಕ್ಕೆ ಬಂದಾಗಿನಿಂದಲೂ ವಿರೋಧಿಸಿಕೊಂಡು ಬರ್ತಿದ್ದೀನಿ ಎಂದರು.

ಮಂಡ್ಯದಲ್ಲಿ ಜೆಡಿಎಸ್ ಬಹಳ ವೀಕ್ :ಮಂಡ್ಯದಲ್ಲಿ ಜೆಡಿಎಸ್ ಸ್ಟ್ರಾಂಗ್ ಇದ್ದಿದ್ದರೆ ಎಂಪಿ ಚುನಾವಣೆ ಸೋಲುತ್ತಿದ್ರಾ.. ಮಂಡ್ಯದಲ್ಲಿ ಜೆಡಿಎಸ್ ಬಹಳ ವೀಕ್ ಆಗಿದ್ದಾರೆ. ನಾವು ಅಭ್ಯರ್ಥಿ ಹಾಕಿರಲಿಲ್ಲ, ಅವರು ಸೋತ್ರು. ಎಷ್ಟು ಅಂತರದಲ್ಲಿ ಸೋತ್ರು?.. ಎಷ್ಟು ಎಂಎಲ್ಎ ಗಳಿದ್ದಾರೆ?. ಜೆಡಿಎಸ್ ಸ್ಟ್ರಾಂಗ್ ಇದ್ದಿದ್ದರೆ ಸೋಲ್ತಿದ್ರಾ ಎಂದು ಮಂಡ್ಯ ಲೋಕಸಭೆಯಲ್ಲಿ ನಿಖಿಲ್ ಸೋಲು ಅಣಕಿಸಿದರು.

ಇದನ್ನೂ ಓದಿ:ಭಾರತದಲ್ಲಿ ಇಂಧನ ಕೊರತೆ ಉಂಟಾಗದು; ಅನಗತ್ಯ ಆತಂಕ ಸೃಷ್ಟಿ ಬೇಡ: ಕೇಂದ್ರ ಸರ್ಕಾರ

ಕಲ್ಲಿದ್ದಲು ಕೊರತೆ ವಿಚಾರಕ್ಕೆ ಪ್ರತಿಕ್ರಿಯೆ :ರಾಜ್ಯದಲ್ಲಿ ಕಲ್ಲಿದ್ದಲು ಕೊರತೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರದ ಜೊತೆ ಮಾತನಾಡಿ ಅವಶ್ಯಕತೆ ಇರುವ ಕಲ್ಲಿದ್ದಲು ತರಿಸಿಕೊಳ್ಳಬೇಕು. ಕಲ್ಲಿದ್ದಲು ಕೊರತೆಯಿಂದ ವಿದ್ಯುತ್ ತಯಾರಾಗುವುದು ನಿಲ್ಲಬಾರದು. ಇದರಿಂದ ರೈತರಿಗೆ, ಗ್ರಾಹಕರಿಗೆ ತೊಂದೆಯಾಗಬಾರದು,ಇದು ಸರ್ಕಾರದ ಜವಾಬ್ದಾರಿ ಎಂದರು.

ABOUT THE AUTHOR

...view details