ಕರ್ನಾಟಕ

karnataka

ETV Bharat / state

ಮಂಡ್ಯದಲ್ಲಿ ಪ್ರೇಕ್ಷಕರ ಮೇಲೆ ಹರಿದ ಎತ್ತಿನ ಗಾಡಿ.. ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ - ETV Bharath Kannada news

ಎತ್ತಿನ ಗಾಡಿ ಸ್ಪರ್ಧೆ ವೇಳೆ ದುರ್ಘಟನೆ - ಪ್ರೇಕ್ಷಕನ ಮೇಲೆ ಹರಿದ ಎತ್ತಿನ ಬಂಡಿ - ಸ್ಥಳದಲ್ಲೇ ಓರ್ವ ಸಾವು, ಗಂಭೀರವಾಗಿ ಗಾಯಗೊಂಡ ಯುವಕ

Etv Bharatone-persons-injured-and-one-died-due-to-bulla-cart-crash-in-mandya
Etv Bharatಎತ್ತಿನ ಗಾಡಿ ಓಟ ಸ್ಪರ್ಧೆ

By

Published : Jan 8, 2023, 7:43 PM IST

Updated : Jan 8, 2023, 8:27 PM IST

ಪ್ರೇಕ್ಷಕರ ಮೇಲೆ ಹರಿದ ಗಾಡಿ ಓರ್ವ ಸಾವು ಘಟನೆಯ ವಿಡಿಯೋ ನೋಡಿ...

ಮಂಡ್ಯ:ಎತ್ತಿನ ಗಾಡಿ ಓಟದ ಸ್ಪರ್ಧೆ ವೀರಾವೇಶದ ಆಟದಲ್ಲೊಂದು. ಜೋಡಿ ಎತ್ತಿನ ಗಾಡಿಯ ಮೇಲೆ ಸಾರಥಿ ಕುಳಿತು ಎತ್ತುಗಳನ್ನು ಗುರಿ ಮುಟ್ಟಿಸುವ ಸಲುವಾಗಿ ಹೋರಿಗಳಿಗೆ ಬೇಗ ಓಡುವಂತೆ ಸನ್ನೆ ಮಾಡುತ್ತಿರುತ್ತಾನೆ. ಎರಡು ಎತ್ತಿನ ಗಾಡಿಗಳನ್ನು ಒಮ್ಮೆಗೆ ಬಿಡಲಾಗುತ್ತದೆ. ಈ ವೇಳೆ ಅಂತ್ಯದ ಗೆರೆಯನ್ನು ಯಾವ ಗಾಡಿ ಮೊದಲು ತಲುಪುತ್ತದೆ ಎಂಬುದರ ಆಧಾರದಲ್ಲಿ ಗೆಲುವನ್ನು ನಿರ್ಧರಿಸಲಾಗುತ್ತದೆ. ಈ ರೀತಿ ಆಯೋಜನೆಗೊಂಡಿದ್ದ ಓಟದ ಸ್ಪರ್ಧೆಯಲ್ಲಿ ಅವಘಡ ಸಂಭವಿಸಿದೆ.

ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ವೀಕ್ಷಣೆಗೆ ಬಂದಿದ್ದ ವ್ಯಕ್ತಿಯ ಮೇಲೆ ಎತ್ತಿನ ಗಾಡಿ ಹರಿದ ಪರಿಣಾಮ ಸಾವು ಸಂಭವಿಸಿದೆ. ಎತ್ತಿನಗಾಡಿ ಓಟದ ಸ್ಪರ್ಧೆಯ ವೀಕ್ಷಣೆಗೆ ಬಂದಿದ್ದ ವ್ಯಕ್ತಿಯ ಮೇಲೆ ಚಕ್ಕಡಿ ಹರಿದಿದ್ದು, ಓರ್ವ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿವೆ. ಮಂಡ್ಯದ ಜಿಲ್ಲೆಯ ಚಿಕ್ಕ ಮಂಡ್ಯ ಗ್ರಾಮದಲ್ಲಿ ಭಾನುವಾರ ಹಳ್ಳಿಕೇಶ್ವರ ಬೀರೇಶ್ವರ ಯುವಕರ ಸಂಘದ ವತಿಯಿಂದ ಎರಡು ದಿನಗಳ ಕಾಲ ಎತ್ತಿನ ಗಡಿ ಓಟದ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು.

ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ:ಸ್ಪರ್ಧೆ ವೀಕ್ಷಣೆ ಮಾಡಲು ಆಗಮಿಸಿದ್ದ ಕೀಲಾರ ಗ್ರಾಮದ ನಾಗರಾಜು (42) ಮೃತರು. ಹುಲಿವಾನ ಗ್ರಾಮದ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನ ಎದೆ ಮೇಲೆ ಎತ್ತು ಕಾಲಿಟ್ಟಿದ್ದರಿಂದ ಉಸಿರಾಟದ ಸಮಸ್ಯೆ ಆಗಿದೆ ಎಂದು ತಿಳಿದುಬಂದಿದೆ. ಅಂತಾರಾಜ್ಯ ಸ್ಪರ್ಧೆ ವೀಕ್ಷಣೆಗೆ ಸುಮಾರು ಹತ್ತು ಗ್ರಾಮದ ಗ್ರಾಮಸ್ಥರು ಕಿಕ್ಕಿರಿದು ಸೇರಿದ್ದರು. ಎತ್ತಿನ ಓಟದ ಸ್ಪರ್ಧೆ ನೋಡಲೆಂದು ಗೆಲುವಿನ ಗೆರೆಯ ಮುಂಭಾಗದಲ್ಲಿ ಹಲವಾರು ಜನ ನಿಂತಿದ್ದರು. ವೇಗವಾಗಿ ಓಡಿಕೊಂಡು ಬಂದ ಎತ್ತುಗಳು ಗೆರೆ ನಂತರವೂ ಮುಂದುವರೆದು ಓಡಿವೆ. ಈ ವೇಳೆ ಗುಂಪಾಗಿ ನಿಂತಿದ್ದ ಪ್ರೇಕ್ಷಕರು ಚದುರುವ ವೇಳೆಗಾಗಲೇ ವೇಗವಾಗಿ ಬಂದ ಎತ್ತಿನ ಗಾಡಿ ಜನರಿಗೆ ಗುದ್ದಿದೆ.

ಈ ವೇಳೆ ಇಬ್ಬರು ಗಾಡಿಗೆ ಸಿಲುಕಿದ್ದಾರೆ. ಕೀಲಾರ ಗ್ರಾಮದ ನಾಗರಾಜು ಎಂಬುವವರ ಮೇಲೆ ಎತ್ತಿನ ಗಾಡಿ ಹರಿದದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಎತ್ತುಗಳು ಗುದ್ದಿದ ವೇಳೆ ಕೆಳಗೆ ಬಿದ್ದ ನಾಗರಾಜುವಿನ ಮುಖದ ಮೇಲೆ ಗಾಡಿ ಹರಿದ ಪರಿಣಾಮ ಸ್ಥಳದಲ್ಲೇ ಅವರ ಪ್ರಾಣಪಕ್ಷಿ ಹಾರಿದೆ. ಹುಲಿವಾನ ಗ್ರಾಮದ ಮತ್ತೊಬ್ಬ ಯುವಕನ ಎದೆ ಮೇಲೆ ಎತ್ತು ಕಾಲಿರಿಸಿದ್ದರಿಂದ ಗಾಯಗೊಂಡಿದ್ದಾನೆ. ಶನಿವಾರದಿಂದ ಆರಂಭವಾಗಿದ್ದ ಈ ಸ್ಪರ್ಧೆಯ ಎರಡನೇ ದಿನವಾದ ಭಾನುವಾರ ಈ ದುರಂತ ಸಂಭವಿಸಿದೆ.

ಅಂತಾರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಡಿಸುವ ಸ್ಪರ್ಧೆ ಚಿಕ್ಕ ಮಂಡ್ಯ ಗ್ರಾಮದಲ್ಲಿ ನಡೆಯುತ್ತಿತ್ತು. ಸ್ಪರ್ಧೆ ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದಿಂದ ಹಲವಾರು ಜನರು ಆಗಮಿಸಿದ್ದರು. ಈ ಸ್ಪರ್ಧೆಯ ವೇಳೆ ಈ ಅವಘಡ ನಡೆದಿದೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಈ ಹಿಂದಿನ ಘಟನೆಗಳು:ಹಿಂದೆಯೂ ಈ ರೀತಿ ಸ್ಪರ್ಧೆ ವೇಳೆ ದುರ್ಘಟನೆಗಳು ಸಂಭವಿಸಿವೆ. ಮೈಸೂರು ಜಿಲ್ಲೆಯ ತಿ‌. ನರಸೀಪುರ ಪಟ್ಟಣದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಯುವಕರ ಸ್ನೇಹ ಬಳಗದಿಂದ ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ವೇಳೆಯೂ ಪ್ರೇಕ್ಷಕರ ಮೇಲೆ ಬಂಡಿ ಹರಿದ ಪರಿಣಾಮ ಕೆಲವರು ಗಂಭೀರವಾಗಿ ಗಾಯಗೊಂಡಿದ್ದರು.

ಇದನ್ನೂ ಓದಿ:ಓಟದ ಸ್ಪರ್ಧೆಯಲ್ಲಿ ಎತ್ತಿನಗಾಡಿ ಹರಿದು ಇಬ್ಬರಿಗೆ ಗಂಭೀರ ಗಾಯ

ಸ್ಪರ್ಧೆ ವೇಳೆ ಜನರತ್ತ ನುಗ್ಗಿ ಬಂದ ಎತ್ತುಗಳು: ವೃದ್ಧೆಯ ಕಾಲು ಮುರಿತ

Last Updated : Jan 8, 2023, 8:27 PM IST

ABOUT THE AUTHOR

...view details